ನವೆದೆಹಲಿ,ಡಿ.18- ಸತ್ಯಗಳು ಹೊರಬಂದು ಬಣ್ಣಗಳು ಕಳಚಿದರೆ ನೀವು ತಿರಸ್ಕರಿಸಲ್ಪಡುತ್ತೀರಿ. ನಾನು ಎಲ್ಲವನ್ನು ಮುಕ್ತವಾಗಿ ತೆರೆದಿಡುತ್ತೇನೆ ಎಂದು ಜೈಲು ಹಕ್ಕಿ ಸುಕೇಶ್ ಚಂದ್ರಶೇಖರ್ ಆಮ್ ಆದ್ಮಿ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿದ್ದಾರೆ.
ಹೊಸದಾಗಿ ನಾಲ್ಕು ಪುಟಗಳ ಪತ್ರ ಬರೆದಿರುವ ಅವರು ಅದನ್ನು ತಮ್ಮ ವಕೀಲರ ಮೂಲಕ ಬಹಿರಂಗಪಡಿಸಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಚಿವ ಸತ್ಯೇಂದ್ರ ಜೈನ್ ಅವರು ಬಿಜೆಪಿ ವಿರುದ್ಧ ಮಾತನಾಡುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದರು.
ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ ರಾಜ್ಯದ ಜ್ವಲಂತ ಸಮಸ್ಯೆಗಳು
ಇದು ಆರಂಭ ಮಾತ್ರ. ನಿಮ್ಮ ರಾಜಕೀಯ ಮುಕ್ತಾಯಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಬಿಜೆಪಿ ಸರ್ಕಾರ ಆಪ್ ನಾಯಕರ ವಿರುದ್ಧ ಪತ್ರ ಬರೆಯುವಂತೆ ಒತ್ತಡ ಹೇರುತ್ತಿದೆ ಎಂದು ಲೆಫ್ಟಿನೆಂಟ್ ಗೌರ್ನರ್ ವಿ.ಕೆ.ಸೆಕ್ಸೇನ ಅವರಿಗೆ ಪತ್ರ ಬರೆಬೇಕೆಂದು ನನ್ನನ್ನು ಬಲವಂತಪಡಿಸಲಾಗುತ್ತಿತ್ತು.
ಅರವಿಂದ ಕೇಜ್ರಿವಾಲ್, ಸತ್ಯೇಂದ್ರ ಜೈನ್ ಅವರ ಕುರಿತು ಪತ್ರದುದ್ದಕ್ಕೂ ಸುಕೇಶ್ ಚಂದ್ರಶೇಖರ್ ಆರೋಪಗಳ ಸುರಿಮಳೆಗೈದಿದ್ದಾರೆ.
#MoneyLaunderingCase, #SukeshChandrasekhar, #Allegations, #Kejriwal, #SatyendarJain,