ಬೆಂಗಳೂರು,ಫೆ.25- ನಿರ್ಮಾಣ ಹಂತದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಿಫ್ಟ್ ಗುಂಡಿಗೆ ಬಲಿಯಾದ ಮಗುವನ್ನು ಮಹೇಶ್ವರಿ ಎಂದು ಗುರುತಿಸಲಾಗಿದೆ.
ಸುಲ್ತಾನ್‍ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿ ಮಾಡಲು ಬಂದಿದ್ದ ದಂಪತಿ ಪುತ್ರಿಯಾಗಿದ್ದ ಮಹೇಶ್ವರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಐದಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ನಿರ್ಮಿಸಲು ಗುಂಡಿ ತೊಡಲಾಗಿತ್ತು. ನಿರ್ಮಾಣ ಹಂತದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ದಂಪತಿ ವಾಸಿಸುತ್ತಿದ್ದರು.
ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ..?
ನಿನ್ನೆ ತಡರಾತ್ರಿ ಕಟ್ಟಡದ ಮುಂದೆ ಆಟವಾಡುತ್ತಿದ್ದ ಮಗು ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಇಂದು ಬೆಳಿಗ್ಗೆ ಪೋಷಕರು ಮಗು ನಾಪತ್ತೆಯಾಗಿರುವುದನ್ನು ಕಂಡು ಶೋಧ ನಡೆಸಿದಾಗ ಮಗು ಶವ ಗುಂಡಿಯಲ್ಲಿದ್ದ ನೀರಿನಲ್ಲಿ ತೇಲುತಿತ್ತು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಮಾರುಕಟ್ಟೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
construction, lift, falling, child, death, BANGALORE,