ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಕಂಟೇನರ್

Social Share

ದಾಬಸ್ ಪೇಟೆ ‌: ತಡರಾತ್ರಿ ತಾಂತ್ರಿಕ ದೋಷದ ಸಮಸ್ಯೆಯಿಂದ ಕಂಟೇನರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಲಾರಿ ಕ್ಯಾಬಿನ್ ಮತ್ತು ಕೊರಿಯರ್ ಬಾಕ್ಸ್ಗಳು ಹಾನಿಯಾದ ಘಟನೆ ನೆಲಮಂಗಲ ತಾಲ್ಲೂಕು ದಾಬಸ್ ಪೇಟೆಯ ಸಮೀಪದ ರಾಯರಪಾಳ್ಯ ಗೇಟ್ ಬಳಿ ನೆಡೆದಿದೆ.
ಇನ್ನೂ ಗುಜರಾತ್‌ನ ಆದಿತ್ಯ ಕಾರ್ಗೋಸ್ನ
ಶಿವಾ ಎಕ್ಸ್‌ಪ್ರೆಸ್‌ ಡಿಲಿವರಿ ಕೊರಿಯರ್ ಕಂಪನಿ ಸಂಬಂಧಿಸಿದ ಕಂಟೇನರ್ ಲಾರಿ ಇದಾಗಿದ್ದು, ಸೂರತ್ ನಿಂದ ಬೆಂಗಳೂರಿಗೆ ಲಾರಿ ಬರುತ್ತಿತ್ತು. ಇದೇ ವೇಳೆ ರಾಯರ ಪಾಳ್ಯದ ಬಳಿ ಬೆಂಕಿ ಕಾಣಿಸಿಕೊಂಡು ಲಾರಿ ಕ್ಯಾಬಿನ್ನಲ್ಲಿ ತಾಂತ್ರಿಕ ದೋಷದಿಂದ ಹೊತ್ತಿದ ಬೆಂಕಿಯಿಂದ ಕೆಲ ಕೋರಿಯರ್ ಬಾಕ್ಸ್ ಹಾನಿಯುಂಟಾಗಿದೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ರೆ, ಜೆಸಿಬಿ ಯಂತ್ರದ ಮೂಲಕ ಲಾರಿ ಕ್ಯಾಬಿನ್ ಹಿಂಬದಿಯ ಕಬ್ಬಿಣದ ಶೀಟ್ ಕತ್ತರಿಸಿ ಕೊರಿಯರ್ ಬಾಕ್ಸ್ ಸೇರಿದಂತೆ ಇತರೆ ವಸ್ತುಗಳನ್ನ ಹೊರತೆಗೆಯಲಾಗಿತ್ತು. ಈ ಸಂಬಂಧ ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ..

Articles You Might Like

Share This Article