ಕೊರೊನಾ ಬ್ಲಾಸ್ಟ್ : ಬೆಂಗಳೂರಿನಲ್ಲಿ ಯಾವ ಏರಿಯಾ ತುಂಬಾ ಡೇಂಜರ್..?

Social Share

ಬೆಂಗಳೂರು, ಜ.12- ರಾಜ್ಯ ರಾಜಧಾನಿಯಿಂದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬೆರಳೆಣಿಕೆಯಷ್ಟಿದ್ದ ಕಂಟೈನ್ಮೆಂಟ್ ಜೋನ್ ಸಂಖ್ಯೆ ಇದೀಗ 476ಕ್ಕೆ ತಲುಪಿದೆ. ಕಳೆದ ಒಂದು ವಾರದಿಂದ ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ನಿರೀಕ್ಷೆಗೂ ಮೀರಿ ನಗರದಲ್ಲಿ ಸೋಂಕು ಹರಡುತ್ತಿದೆ. ಈ ಪೈಕಿ ಪ್ರಮುಖವಾಗಿ ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್‍ಗಳು ಇವೆ.
ನಗರದ ಪೂರ್ವ, ಪಶ್ಚಿಮ ವಲಯ ಸೇರಿದಂತೆ ಒಟ್ಟು ಎಂಟು ವಲಯಗಳಲ್ಲಿ 2140 ಕಂಟೈನ್ಮೆಂಟ್ ಜೋನ್ ಗುರುತಿಸಲಾಗಿದೆ. ಈ ಪೈಕಿ 479 ಕಂಟೈನ್ಮೆಂಟ್ ಜೋನ್‍ಗಳು ಸಕ್ರಿಯವಾಗಿವೆ ಎಂದು ಬಿಬಿಎಂಪಿ ಅಧಿಕೃತ ಮೂಲಗಳು ತಿಳಿಸಿವೆ.
#ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್:
ಬೊಮ್ಮನಹಳ್ಳಿ-114, ಮಹದೇವ ಪುರ-165, ದಕ್ಷಿಣ ವಲಯ-53, ಪಶ್ಚಿಮ ವಲಯ-53, ಪೂರ್ವ ವಲಯ-37, ಯಲಹಂಕ-49, ದಾಸರಹಳ್ಳಿ -5, ಆರ್‍ಆರ್ ನಗರ -4 ಸೇರಿದಂತೆ ಒಟ್ಟು 479 ಕಂಟೈನ್ಮೆಂಟ್ ಜೋನ್ ಗಳಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 10,800 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿವೆ. 3 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು 12,43,995 ಜನರು ಗುಣಮುಖರಾಗಿದ್ದಾರೆ.
ನಗರದಲ್ಲಿ ಇಲ್ಲಿಯವರೆಗೆ ಒಟ್ಟು 13,19,340 ಕೊರೊನಾ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,427 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Articles You Might Like

Share This Article