ಜ.18 ರಿಂದ ಕಾಮಗಾರಿ ಸ್ಥಗಿತಗೊಳಿ ಗುತ್ತಿಗೆದಾರರ ಪ್ರತಿಭಟನೆ

Social Share

ಬೆಂಗಳೂರು,ಜ.16-ಬಾಕಿ ಇರುವ ಹಣವನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ಇದೇ 18ರಿಂದ ರಾಜ್ಯಾದ್ಯಂತ ಕಾಮಗಾರಿಯನ್ನು ಸ್ಥಗಿತಗೊಳಿ ನಗರದ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್, ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸರಕಾರಗಳೂ ಸ್ಪಂದಿಸುತ್ತಿಲ್ಲ. ಪ್ರತೀ ಸರಕಾರಕ್ಕೂ ಮನವಿ ಸಲ್ಲಿಸುತ್ತಾ ನಮ್ಮ ಬೇಡಿಕೆಗಳಿಗೆ ಹಂತ ಹಂತವಾಗಿಯಾದರೂ ಸ್ಪಂದಿಸುವಂತೆ ಕೇಳಿಕೊಳ್ಳುತ್ತಿದ್ದರೂ ಸರಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತಿವೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳು, ಸಚಿವರು ಮತ್ತು ಅಕಾರಿಗಳಿಗೆ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಹೋರಾಟದ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಬಾರಿ ಬೆಂಗಳೂರು ಇತಿಹಾಸ ತಿಳಿಸುವ ಫಲಪುಷ್ಪ ಪ್ರದರ್ಶನ : ಸಚಿವ ಮುನಿರತ್ನ

ನಮ್ಮ ಬೇಡಿಕೆಗಳು ಈಡೇರಿಸಲಾಗ ದಂತಹ ಸಮಸ್ಯೆಗಳೇನೂ ಇಲ್ಲ. ಪೂರ್ಣಗೊಳಿಸಿರುವ ಕಾಮಗಾರಿಗಳಿಗೆ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ಕೇಳುವುದು ತಪ್ಪೇ? ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಆಗ್ರಹಿಸುವುದು ತಪ್ಪೇ? ಜಿಎಸ್‍ಟಿ ಗೊಂದಲವನ್ನು ಬಗೆಹರಿಸುವಂತೆ ಕೇಳುವುದೇ ತಪ್ಪೇ? ಎಂದು ಪ್ರಶ್ನಿಸಿದರು.

ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ರೂಪಿಸಬಹುದಾದರೂ ಸರಕಾರ ಕಡೆಗಣಿಸುತ್ತಿದೆ. ಆದ್ದರಿಂದ ಹೋರಾಟದ ಮೂಲಕವೇ ಸರಕಾರವನ್ನು ಎಚ್ಚರಿಸುವುದು ಅನಿವಾರ್ಯವಾಗಿದೆ ಎಂದು ಗುಡುಗಿದರು.
ಈ ಹಿಂದೆ 20222ರ ಏಪ್ರಿಲ್‍ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದರು. ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಭರವಸೆಗಳು ಕೇವಲ ಕಡತಗಳಲ್ಲಿ ಮಾತ್ರ ಉಳಿದುಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಮೀಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಹಣ ಬಿಡುಗಡೆಗೆ ಶಾಸಕ ತಿಪ್ಪಾರೆಡ್ಡಿ ತಡೆಯೊಡ್ಡಿದ್ದಾರೆ. ಹಣ ಬಿಡುಗಡೆಯಾಗಬೇಕಾದರೆ ಕಮೀಷನ್ ನೀಡಬೇಕು ಎಂದು ಶಾಸಕರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಲಾಯಿತು.

ಭದ್ರತೆ ಲೆಕ್ಕಿಸದೆ ಮಹಿಳಾ ಕಾರ್ಯಕರ್ತರ ಕೈ ಕುಲುಕಿದ ಪ್ರಿಯಾಂಕಾ

ಶಾಸಕ ತಿಪ್ಪಾರೆಡ್ಡಿ ಅವರ ಕ್ಷೇತ್ರದಲ್ಲಿ 700ರಿಂದ 800 ಕೋಟಿ ಕಾಮಗಾರಿ ನಡೆದಿದೆ. ಕೈ ಬೆರಳುಗಳ ಮೂಲಕ ಕಮೀಷನ್ ಕೇಳುತ್ತಿದ್ದ ಅವರು ಕೋವಿಡ್ ಸಮಯದಲ್ಲಿ 10% ಕಮೀಷನ್ ಪಡೆದಿದ್ದಾರೆ. ಎರಡನೇ ಕೋವಿಡ್ ಅಲೆಯಲ್ಲೂ 10% ಕಮೀಷನ್ ಪಡೆದಿದ್ದಾರೆ. ಈ ಬಗ್ಗೆ ದಾಖಲೆಗಳಿವೆ ಎಂದು ದೂರಿದರು.

contractor, protest, Freedom Park, Bengaluru,

Articles You Might Like

Share This Article