ಬೆಂಗಳೂರು,ಜ.18- ಬಾಕಿ ಇರುವ 20 ಸಾವಿರ ಕೋಟಿ ರೂ.ಗಳ ಬಿಲ್ ಬಿಡುಗಡೆಗೆ ಒತ್ತಾಯಿಸಿ ಇಂದು ಗುತ್ತಿಗೆದಾರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಸಾವಿರಾರು ಪದಾಕಾರಿಗಳು ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿ 40 ಪರ್ಸೆಂಟ್ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಮಂಜುನಾಥ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನಮಗೆ ಸರ್ಕಾರದಿಂದ ಸುಮಾರು 20 ಸಾವಿರ ಕೋಟಿ ರೂ.ಗಳ ಬಿಲ್ ಬರಬೇಕಿದೆ.
ಹೀಗಾಗಿ ನಾವು ಇಂದು ಒಂದು ದಿನ ಸಾಂಕೇತಿಕವಾಗಿ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದೇವೆ. ಈ ತಿಂಗಳ ಅಂತ್ಯದೊಳಗೆ ನಮ್ಮ ಬಿಲ್ ಬಿಡುಗಡೆ ಮಾಡದಿದ್ದರೆ ಎಲ್ಲ ಕಾಮಗಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರು ಎಚ್ಚರಿಸಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಸಿದ್ದರಾಮಯ್ಯ
ಕಳೆದ ಬಾರಿಯ ಸರ್ಕಾರ ನೀಡಿದ್ದ ಭರವಸೆ ಇನ್ನೂ ಭರವಸೆಯಾಗಿ ಉಳಿದಿದೆ.ಬಿಲ್ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಸಿಕೊಂಡಿಲ್ಲ.ಬಾಕಿ ಮೊತ್ತದಲ್ಲಿ ಒಂದು ರೂಪಾಯಿ ಕೂಡ ಪಾವತಿಯಾಗಿಲ್ಲ.
ಭ್ರಷ್ಟಾಚಾರ ಆರೋಪ ಮಾಡಿದರೆ ಬಿಜೆಪಿಯವರು ಜೈಲಿಗೆ ಕಳುಹಿಸುತ್ತಾರೆ. ನ್ಯಾಯ ಕೇಳಿದರೆ ಬಿಲ್ ಪಾವತಿ ತಡ ಮಾಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಾಕಿ ಬಿಲ್ ಬಿಡುಗಡೆಗೆ ಇಲ್ಲ ಸಲ್ಲದ ತಾಂತ್ರಿಕ ಕಾರಣಗಳನ್ನು ಹೇಳಿ ಪಾವತಿ ದಿನಾಂಕ ಮುಂದೂಡುತ್ತಿರುವ ಸರ್ಕಾರಕ್ಕೆ ನಮ್ಮ ತಾಕತ್ತು ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
#Contractors, #demand, #release, #PendingBill,