ಲಕ್ನೋ,ಜ.30- ಬಿಜೆಪಿ ಪಕ್ಷದವರಂತೆ ಸಮಾಜವಾದಿ ಪಕ್ಷದವರು ರಾಮನ ಹೆಸರಿನಲ್ಲಿ ಮತ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ. ತುಳಸಿದಾಸರು ಬರೆದ ರಾಮಚರಿತಮಾನಸದಲ್ಲಿರುವ ಕೆಲವು ಪದ್ಯಗಳು ಸಮಾಜದ ದೊಡ್ಡ ವರ್ಗಗಳನ್ನು ಅವಮಾನಿಸಿವೆ ಎಂದು ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರು ಇತ್ತಿಚೆಗೆ ಆರೋಪಿಸಿದ್ದರು.
ಮಾತ್ರವಲ್ಲ, ಜಾತಿ ಆಧಾರದ ಮೇಲೆ ಪಠ್ಯದಲ್ಲಿರುವ ಕೆಲವು ಭಾಗಗಳನ್ನು ನಿಧಿಷೇಸುವಂತೆಯೂ ಅವರು ಆಗ್ರಹಿಸಿದ್ದರು. ಇದರಿಂದ ಕುಪಿತಗೊಂಡಿರುವ ಮಾಯಾವತಿ ಅವರು ಇಂದು ಸರಣಿ ಟ್ವಿಟ್ ಮೂಲಕ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಹೊಸ ವಿವಾದಗಳನ್ನು ಸೃಷ್ಟಿಸುವ ಬಿಜೆಪಿಯ ತಂತ್ರ ಎಲ್ಲರಿಗೂ ತಿಳಿದಿದೆ. ಆದರೆ, ಸಮಾಜವಾದಿ ಪಕ್ಷ ಕೂಡ ಇದೀಗ ಬಿಜೆಪಿ ಹಾದಿಯನ್ನೆ ತುಳಿಯುತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಹಾಡು ಹಾಡದ ಕೈಲಾಷ್ ಖೇರ್ ಮೇಲೆ ಬಾಟಲಿ ದಾಳಿ
ಸಂಕುಚಿತ ರಾಜಕೀಯ ಮತ್ತು ಚುನಾವಣಾ ಹಿತಾಸಕ್ತಿಗಳಿಗಾಗಿ ಹೊಸ ವಿವಾದಗಳನ್ನು ಸೃಷ್ಟಿಸುವುದು, ಜನಾಂಗೀಯ ಮತ್ತು ಧಾರ್ಮಿಕ ದ್ವೇಷವನ್ನು ಹರಡುವುದು, ಉನ್ಮಾದವನ್ನು ಸೃಷ್ಟಿಸುವುದು ಮತ್ತು ಧಾರ್ಮಿಕ ಮತಾಂತರಗಳಂತಹ ಬಿಜೆಪಿಯ ರಾಜಕೀಯ ಗುರುತು ಎಲ್ಲರಿಗೂ ತಿಳಿದಿದೆ. ಆದರೆ ಎಸ್ಪಿಯ ಅದೇ ರಾಜಕೀಯ ಬಣ್ಣ, ರಾಮಚರಿತ್ಮಾನಗಳ ಸೋಗಿನಲ್ಲಿ ಲಾಭ ಪಡೆಯಲು ಮುಂದಾಗಿರುವುದು ದುರದೃಷ್ಟಕರ ಎಂದು ಮಾಯಾವತಿ ಹೇಳಿದರು.
ಮೌರ್ಯ ಅವರ ಹೇಳಿಕೆಗಳ ಬಗ್ಗೆ ಎಸ್‍ಪಿ ನಾಯಕತ್ವದ ಮೌನವನ್ನು ಪ್ರಶ್ನಿಸಿದ ಅವರು, ಇದು ಎಸ್‍ಪಿ ಮತ್ತು ಬಿಜೆಪಿ ನಡುವಿನ ಒಡಂಬಡಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ಈ ಎರಡೂ ಪಕ್ಷಗಳು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಕೋಮುವಾದಗೊಳಿಸಿವೆ ಮತ್ತು ಅಂತಹ ದ್ವೇಷಪೂರಿತ ರಾಜಕೀಯದ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸಲಹೆ ನೀಡಿದರು.
ಬ್ರಿಟನ್ ಮಾಜಿ ಪ್ರಧಾನಿಗೆ ಜೀವ ಬೆದರಿಕೆ ಹಾಕಿದ್ದರಾ ಪುಟಿನ್..?
ಉತ್ತರ ಪ್ರದೇಶದಲ್ಲಿ ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎಸ್‍ಪಿ-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಮತ್ತು ಧಾರ್ಮಿಕ ಉನ್ಮಾದದ ಮೂಲಕ ಹೆಚ್ಚು ಕೋಮುವಾದ ಮಾಡುವ ಮೂಲಕ ಪರಸ್ಪರ ಪೂರಕವಾಗಿ ಬಿಜೆಪಿ ಇಲ್ಲಿ ಮತ್ತೆ ಅಕಾರಕ್ಕೆ ಬಂದಿತು, ಇಂತಹ ದ್ವೇಷದ ರಾಜಕೀಯಕ್ಕೆ ಬಲಿಯಾಗುವುದನ್ನು ತಪ್ಪಿಸುವುದು ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.
Controversy, Ramcharitmanas, benefitting, SP, BJP, Mayawati,