ಟ್ರಕ್‍ಗೆ ಬೈಕ್ ಡಿಕ್ಕಿ: ಪೊಲೀಸ್ ಸೇರಿ ಇಬ್ಬರು ಸಾವು

Social Share

ರಾಯ್ಪುರ,ಜ.1-ಹೊಸ ವರ್ಷದ ಮುನ್ನಾದಿನದಂದು ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಎರಡು ದ್ವಿಚಕ್ರ ವಾಹನಗಳು ಟ್ರಕ್‍ಗೆ ಡಿಕ್ಕಿ ಹೊಡೆದು ಒಬ್ಬ ಕಾನ್‍ಸ್ಟೇಬಲ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಖಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮೋರಾದಲ್ಲಿ ಅಪಘಾತ ಸಂಭವಿಸಿದ್ದು, ಇಲ್ಲಿನ ಅಭನ್ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಕಾನ್‍ಸ್ಟೇಬಲ್ ಸಂದೀಪ್ ಟಿರ್ಕಿ (32) ರಾತ್ರಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅವರ ದ್ವಿಚಕ್ರ ವಾಹನ ರಸ್ತೆಯಲ್ಲಿ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದಿದೆ.

ಯುಪಿ: ನಾಲ್ವರು ಪೊಲೀಸರನ್ನು ಅಮಾನತು

ಅದೇ ಸಮಯದಲ್ಲಿ, ಮತ್ತೊಂದು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ದಿನೇಶ್ ರಕ್ಸೆಲ್ (30) ತನ್ನ ವಾಹನ ನಿಯಂತ್ರಣವನ್ನು ಕಳೆದುಕೊಂಡು ಟ್ರಕ್‍ಗೆ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಅಧಿಕಾರಿ ಹೇಳಿದರು.

ಪಂಚಮಸಾಲಿ-ಒಕ್ಕಲಿಗ ಮೀಸಲಾತಿ ವಿಚಾರದಲ್ಲಿ ಗೊಂದಲ ಬೇಡ: ಸಿಎಂ ಬೊಮ್ಮಾಯಿ

ಕಾನ್‍ಸ್ಟೇಬಲ್‍ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಪೊಲೀಸರು ಟ್ರಕ್‍ಅನ್ನು ವಶಪಡಿಸಿಕೊಂಡಿದ್ದು, ಅದರ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

2 killed, road, accident, Raipur,

Articles You Might Like

Share This Article