ಬೆಂಗಳೂರು, ಜ.22- ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ 27 ಸಾವಿರ ಗಡಿ ದಾಟಿದ್ದ ಸೋಂಕಿತರ ಪ್ರಮಾಣ ನಿನ್ನೆ 26,790ಕ್ಕೆ ಇಳಿಕೆಯಾಗಿತ್ತು. ಇಂದು 24,748ಕ್ಕೆ ಬಂದು ನಿಂತಿದೆ. ನಿನ್ನೆಗಿಂತ ಇಂದು 2 ಸಾವಿರ ಪ್ರಕರಣಗಳು ಕಡಿಮೆ ದಾಖಲಾಗಿವೆ.
ಬೊಮ್ಮನಹಳ್ಳಿ ವಲಯದಲ್ಲಿ 2824, ದಾಸರಹಳ್ಳಿ 639, ಬೆಂಗಳೂರು ಪೂರ್ವ 3714, ಮಹದೇವಪುರ 3983, ಆರ್ಆರ್ ನಗರ 1497, ದಕ್ಷಿಣ ವಲಯ 3139, ಪಶ್ಚಿಮ 1842, ಯಲಹಂಕ 1254, ಆನೇಕಲ್ 1857, ಬೆಂಗಳೂರು ವಲಯದಲ್ಲಿ 1984 ಪ್ರಕರಣಗಳು ಸೇರಿ ಒಟ್ಟು 24,748 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯಾದ್ಯಂತ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿವೆ. ವೀಕೆಂಡ್, ನೈಟ್ಕಫ್ರ್ಯೂವನ್ನು ಸರ್ಕಾರ ವಿಸಿತ್ತು. ಆದರೆ, ನಿನ್ನೆ ವೀಕೆಂಡ್ ಕಫ್ರ್ಯೂ ರದ್ದುಗೊಳಿಸಿದೆ. ಕೊರೊನಾ ಕಟ್ಟಿಹಾಕಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
