ಬೆಂಗಳೂರು,ಜ.5-ಬಿಬಿಎಂಪಿ ವ್ಯಾಪ್ತಿಯಲ್ಲಿ ಹತ್ತು ವಾರ್ಡ್‍ಗಳಲ್ಲಿ ಎಂಟಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳ್ಳಂದೂರು ವಾರ್ಡ್‍ನಲ್ಲಿ ಬರೊಬ್ಬರಿ 40 ಸೋಂಕಿತರು ಪತ್ತೆಯಾಗಿದ್ದರೆ, ದೊಡ್ಡನೆಕ್ಕುಂದಿಯಲ್ಲಿ 17, ಹಗದೂರು 15, ಎಚ್‍ಎಸ್‍ಆರ್ ಬಡಾವಣೆ 14, ಅರಕೆರೆ 13, ವರ್ತೂರು 13, ಹೊರಮಾವು 12, ಹೊಸತಿಪ್ಪಸಂದ್ರದಲ್ಲಿ 11, ಕೋರಮಂಗಲದಲ್ಲಿ 10 ಹಾಗೂ ಹೊಯ್ಸಳನಗರದಲ್ಲಿ 9 ಪ್ರಕರಣಗಳು ಬೆಳಕಿಗೆ ಬಂದಿವೆ.
ನಗರದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಏರಿಕೆಯಾಗುತ್ತಿರುವುದರಿಂದ ಮೈಕ್ರೋ ಕಂಟೈನ್‍ಮೆಂಟ್ ಜೋನ್‍ಗಳ ಸಂಖ್ಯೆಯೂ ಏರಿಕೆಯಾಗುತ್ತಿವೆ. ಒಂದೇ ಸ್ಥಳದಲ್ಲಿ3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ ಅಂತಹ ಸ್ಥಳವನ್ನು ಮೈಕ್ರೋ ಕಂಟೈನ್‍ಮೆಂಟ್ ಎಂದು ಗುರುತಿಸಲಾಗುತ್ತಿದ್ದು, ಇದುವರೆಗೂ ನಗರದಲ್ಲಿ 154 ಕಂಟೈನ್‍ಮೆಂಟ್ ಜೋನ್‍ಗಳನ್ನು ಗುರುತಿಸಲಾಗಿದೆ.
ಬೊಮ್ಮನಹಳ್ಳಿಯಲ್ಲಿ 49, ಮಹದೇವಪುರದಲ್ಲಿ 48, ದಕ್ಷಿಣ 15, ಪಶ್ಚಿಮ 16, ಪೂರ್ವ 12, ಯಲಹಂಕ 10, ದಾಸರಹಳ್ಳಿ 3 ಹಾಗೂ ಆರ್‍ಆರ್‍ನಗರದಲ್ಲಿ ಒಂದು ಮೈಕ್ರೋ ಕಂಟೈನ್‍ಮೆಂಟ್ ರಚನೆ ಮಾಡಲಾಗಿದೆ.
# ಪಾಸಿಟಿವಿಟಿ ದರದಲ್ಲೂ ಹೆಚ್ಚಳ:
ಮಹದೇವಪುರದಲ್ಲಿ ಶೇ.2.45, ಪೂರ್ವವಲಯದಲ್ಲಿ 2.30, ಬೊಮ್ಮನಹಳ್ಳಿಯಲ್ಲಿ 1.65, ದಕ್ಷಿಣದಲ್ಲಿ 1.60, ಪಶ್ಚಿಮದಲ್ಲಿ 1.09, ಯಲಹಂಕದಲ್ಲಿ 1.02, ದಾಸರಹಳ್ಳಿಯಲ್ಲಿ 0.99 ಹಾಗೂ ಆರ್‍ಆರ್‍ನಗರದಲ್ಲಿ 0.95 ರಷ್ಟು ಪಾಸಿಟಿವಿಟಿ ರೇಟ್ ಇರುವುದು ದಾಖಲೆಗಳಲ್ಲಿ ಬೆಳಕಿಗೆ ಬಂದಿದೆ.
