ಕೊರೊನಾ ಸಂಕಷ್ಟ: ಜನರ ಕಷ್ಟಕ್ಕೆ ಸ್ಟಾರ್ ಗಳ ಸ್ಪಂದನೆ

Spread the love

ಜನರಿಂದ ನಾನು ಮೇಲೆ ಬಂದೆ ಜನರನ್ನೇ ನನ್ನ ದೇವರೆಂದೇ ಇದು ಅಣ್ಣಾವ್ರು (ಡಾ.ರಾಜ್ ಕುಮಾರ್) ರೂಢಿಸಿಕೊಂಡು ಬಂದ ಮಾತು. ಈ ಮಾತಿನಂತೆ ಅಭಿಮಾನಿ ದೇವರುಗಳು ಕಲಾವಿದರ ಚಿತ್ರಗಳನ್ನು ನೋಡಿದರೆ ಮಾತ್ರ ಒಬ್ಬ ನಟ ಸ್ಟಾರ್ ಆಗುವುದು. ಅದೇ ರೀತಿ ಸ್ಟಾರ್ ನಟ ಜನರ ಕಷ್ಟಕ್ಕೆ ಸದಾ ಮಿಡಿಯಬೇಕು ಎಂದು ಕೂಡ ಡಾ.ರಾಜ್ ಹೇಳಿದ್ದರು, ಅದರಂತೆ ಹಲವು ಸ್ಟಾರ್ ನೈಟ್ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದ್ದರು.

ಈಗ ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ಕಷ್ಟಕ್ಕೆ ಸಿಲುಕಿರುವಾಗ ತಾರೆಯರು ಜನರ ಕಷ್ಟಕ್ಕೆ ಧಾವಿಸಿ ಬಂದಿರುವುದನ್ನು ನೋಡಿದರೆ ಡಾ.ರಾಜ್ ಕುಮಾರ್ ರ ಆದರ್ಶಗಳು ನೆನಪಿಗೆ ಬರುತ್ತದೆ. ಕನ್ನಡ ಚಿತ್ರರಂಗ ಮಾತ್ರ ಅಲ್ಲ ತೆಲುಗು, ತಮಿಳು, ಹಿಂದಿ ಚಿತ್ರರಂಗದ ಸ್ಟಾರ್ ನಟರು ಕೂಡ ಜನರ ಹಾಗೂ ಕೊರೊನಾ ಪೀಡಿತರ ನೆರವಿಗೆ ಧಾವಿಸಿದ್ದಾರೆ.

ರೈತರ, ಕಾರ್ಮಿಕರ ಕಷ್ಟಕ್ಕೆ ನೆರವಾದ ಉಪ್ಪಿ:
ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತ ಗೊಂಡು ಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರು ಹಾಗೂ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಕಂಗಾಲಾಗಿರುವ ರೈತರ ನೆರವಿಗೆ ರಿಯಲ್ ಸ್ಟಾರ್ ಉಪೇಂದ್ರ ಧಾವಿಸಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಕೊಟ್ಟು ಅವರಿಂದಲೇ ಖರೀದಿಸಿ ಅದನ್ನು ದಿನಸಿ ಕಿಟ್ ರೂಪದಲ್ಲಿ ಕಾರ್ಮಿಕರಿಗೆ ಕೊಡಲು ಮುಂದಾಗಿದ್ದು, ರೈತರು ಮೊಬೈಲ್ ನಂಬರ್ 9845763396 ಅಥವಾ ವಾಟ್ಸ್ ಆ್ಯಪ್ +919845763396 ಅನ್ನು ಸಂಪರ್ಕಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಉಪ್ಪಿ ಈ ಕಾರ್ಯವನ್ನು ಮೆಚ್ಚಿ ವಿದೇಶದ ಲ್ಲಿ ನೆಲೆಸಿರುವ ದರ್ಶನ್ ಶಾಸ್ತ್ರಿ ಚಿತ್ರ ದ ನಟಿ ಮಾನ್ಯ 1 ಲಕ್ಷ ದೇಣಿಗೆ ನೀಡಿದರೆ, ಹಿರಿಯ ನಟಿ ಸರೋಜಾದೇವಿ, ಸಾಧುಕೋಕಿಲ, ಶೋಭರಾಜ್, ಪವನ್ ಒಡೆಯರ್ ಮುಂತಾದ ನೀರು ನೆರವಿಗೆ ಬಂದಿದ್ದಾರೆ.

ಅನ್ನದಾತೆ ರಾಗಿಣಿ:
ತುಪ್ಪದ ಬೆಡಗಿ ರಾಗಿಣಿ ಕೂಡ ಜನರ ಕಷ್ಟಕ್ಕೆ ಬಂದಿದ್ದು, ಹಸಿದವರಿಗೆ ಅನ್ನ ನೀಡಿದರೆ, ಕಾಮಿಡಿ ನಟ ಚಿಕ್ಕಣ್ಣ ಮೈಸೂರಿನ ಲ್ಲಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಮೊಗ್ಗಿನ ಮನಸ್ಸಿನ ನಟಿ ಶುಭಾಪೂಂಜಾ ಕೂಡ ಜನರಿಗೆ ದಿನಸಿ ಕಿಟ್ ವಿತರಣೆ ಮಾಡು ತ್ತಿದ್ದಾರೆ.

ಆಕ್ಸಿಜನ್ ವ್ಯವಸ್ಥೆ ಮಾಡಿದ ಭುವನ್ ಪೊನ್ನಪ್ಪ, ಹರ್ಷಿಕಾ ಪೂಣಚ್ಚ:
ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಆಗಿರುವುದನ್ನು ಅರಿತು ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಪ್ಪ ಅವರು ತಮ್ಮ ಭುವನ್ ಪೊನ್ನಪ್ಪ ಫೌಂಡೇಶನ್ ವತಿಯಿಂದ 30ಕ್ಕೂ ಹೆಚ್ಚು ಆಟೋಗಳನ್ನು ಆಕ್ಸಿಜನ್ ಆಂಬುಲೆನ್ಸ್ ರೀತಿ ಪರಿವರ್ತನೆ ಮಾಡಿರುವುದಲ್ಲದೆ ಜನರಿಗೆ ರೇಷನ್ ಕಿಟ್ ಹಾಗು ರೋಗಿಗಳಿಗೆ ಔಷಧಿ ವ್ಯವಸ್ಥೆ ಮಾಡಿದ್ದಾರೆ. ಈ ಹಿಂದೆ ಕೊಡಗು, ಉತ್ತರ ಕರ್ನಾಟಕದ ಲ್ಲಿ ಪ್ರವಾಹ ಉಂಟಾದಾಗಲೂ ನಿರಾಶ್ರಿತರಿಗೆ ನೆರವು ನೀಡಿದ್ದರು.

ಕೆಜಿಎಫ್ ನಿರ್ಮಾಪಕ ವಿಜಯ್ ಕಿರಂಗದೂರು ಮಂಡ್ಯ ದಲ್ಲಿ 500 ಎಲ್ಲ ಪಿಎಂ ಸಾಮರ್ಥ್ಯ ದ ಆಕ್ಸಿಜನ್ ಘಟಕ ಅಥವಾ 50 ಐಸಿಯು ಬೆಡ್ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಅವರು ಸಮಾನ ಮನಸ್ಕ ರೊಂದಿಗೆ ಕೂಡಿಕೊಂಡು ಉಸಿರು ತಂಡ ಸ್ಥಾಪಿಸಿ ಆಕ್ಸಿಜನ್ ಪೂರೈಕೆ ಮಾಡಲು ಮುಂದಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿಎಂ ನಿಧಿಗೆ 50 ಲಕ್ಷ ದೇಣಿಗೆ ನೀಡಿದರೆ, ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಕೊರೊನಾ ಮೊದಲ ಅಲೆ ವೇಳೆ ಎನ್ ಜಿಓದೊಂದಿಗೆ ಕೈಜೋಡಿಸಿ ಸಿನಿಮಾ ಕಾರ್ಮಿಕರು ಹಾಗೂ ಜನರಿಗೆ ಆಹಾರ ಪೂರೈಕೆ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಂಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ನವರಸನಾಯಕ ಜಗ್ಗೇಶ್ ಸೇರಿದಂತೆ ಹಲವು ಕಲಾವಿದರು ಜನರ ಕಷ್ಟಕ್ಕೆ ನೆರವು ನೀಡಿದ್ದಾರೆ.

ಕೊರೊನಾ ಪಾಲಿನ ದೇವರಾದ ಸೋನು ಸೂದ್:
ತೆರೆ ಮೇಲೆ ವಿಲನ್ ಆಗಿರುವ ನಟ ಸೋನು ಸೂದ್ ಕೊರೊನಾ ನಿರಾಶ್ರಿತರ ಪಾಲಿನ ದೇವರೇ ಆಗಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದವರ ನೆರವಿಗೆ ಧಾವಿಸಿದ ಸೂದ್ ಸ್ವಂತ ಖರ್ಚಿನಲ್ಲಿ ವಿಮಾನ, ರೈಲು, ಬಸ್ ಗಳ ಮೂಲಕ ಊರುಗಳಿಗೆ ಕಳುಹಿಸಿ ಕೊಟ್ಟರು, ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಒಡೆತನದ ಬಹುಮಹಡಿ ಕಟ್ಟಡವನ್ನೇ ಮೀಸಲಿಟ್ಟಿದ್ದರು. ಸೂದ್ ಇಂಡಿಯಾ ಫೈಟ್ಸ್ ವಿತ್ ಕೋವಿಡ್ ಎಂಬ ಆಪ್ ಆರಂಭಿಸಿದ್ದು, ಅಗತ್ಯ ವಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್, ಔಷಧಿ, ಆಕ್ಸಿಜನ್ ವ್ಯವಸ್ಥೆ ಮಾಡುತ್ತಿರುವುದಲ್ಲದೆ ಬ್ಲಡ್ ಬ್ಯಾಂಕ್ ಸ್ಥಾಪಿಸಿರುವ ಸೂದ್ ಅದರ ಮೂಲಕ ರಕ್ತ ಪೂರೈಕೆ ಮಾಡುತ್ತಿದ್ದಾರೆ.

ಜೀವ ರಕ್ಷಕರಾದ ಬಿಗ್ ಬಿ:
ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೊರೊನಾ ಪರಿಹಾರ ನಿಧಿಗೆ 2 ಕೋಟಿ ದೇಣಿಗೆ ನೀಡಿರುವುದಲ್ಲದೆ, ಪೋಲೆಂಡ್ ನಿಂದ 50 ಆಕ್ಸಿಜನ್ ಸಾಂದ್ರಕ , 20 ವೆಂಟಿಲೇಟರ್ ಖರೀದಿಸಿ ಆಸ್ಪತ್ರೆಗಳಿಗೆ ವಿತರಿಸಿದ್ದಾರೆ.
ಕೊರೊನಾ ಮೊದಲ ಅಲೆಯ ಲಾಕ್ ಡೌನ್ ವೇಳೆ 5000 ಜನ ಕಾರ್ಮಿಕರಿಗೆ ಉಚಿತವಾಗಿ 1 ತಿಂಗಳ ಕಾಲ ಆಹಾರ ಅಭಿಯಾನ ಆರಂಭಿಸಿದ್ದ ಬಿಗ್ ಬಿ 2800 ಕಾರ್ಮಿಕರು ಊರಿಗೆ ತೆರಳಲು ರೈಲು, 3 ಇಂಡಿಗೋ ವಿಮಾನದ ವ್ಯವಸ್ಥೆ ಮಾಡಿದ್ದರಲ್ಲದೆ,1500 ರೈತರ ಸಾಲವನ್ನು ತೀರಿಸಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಪಿಎಂ ನಿಧಿಗೆ 1 ಕೋಟಿ ದೇಣಿಗೆ ನೀಡಿರುವುದಲ್ಲದೆ,1000 ಆಕ್ಸಿಜನ್ ಕಂಟೈನರ್, 5000 ನಸಲ್ ಕನ್ಸಲ್ ವ್ಯವಸ್ಥೆ ಮಾಡಿದ್ದಾರೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್ 2500 ಸಿನಿಮಾ ಕಾರ್ಮಿಕರಿಗೆ ತಲಾ 1500 ರೂ. ಪರಿಹಾರ ಧನ ನೀಡಿದ್ದಾರೆ.

ವಿಕ್ಕಿಕೌಶಲ್ 1 ಕೋಟಿ ದೇಣಿಗೆ ನೀಡಿದ ರೆ, ಸುನೀಲ್ ಶೆಟ್ಟಿ ಮಿಷನ್ ಮಿಲನ್ ಏರ್ ಮೂಲಕ ಆಕ್ಸಿಜನ್ ಕಂಟೈನರ್ ಪೂರೈಕೆ ಮಾಡಿದ್ದಾರೆ. ನಟಿ ಶ್ರದ್ಧಾಕಪೂರ್ ಪ್ಲಾಸ್ಮಾ ದಾನ ಮಾಡಿದ ರೆ, ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜತೆ ಕೈಜೋಡಿಸಿ ಕೊರೊನಾ ನಿಧಿ ಪರಿಹಾರ ಅಭಿಯಾನ ಆರಂಭಿಸಿದ್ದಾರೆ. ಪ್ರಿಯಾಂಕ ಚೋಪ್ರಾ, ಅಲಿಯಾ ಭಟ್, ಭೂಮಿ ಪಡ್ನೇಕರ್, ಊರ್ವಶಿರೌಟೇಲಾ, ಶಿಲ್ಪಾ ಶೆಟ್ಟಿ ಅವರು ಹಸಿದವರಿಗೆ ಊಟ, ದಿನಸಿ ಸಾಮಾಗ್ರಿ ಪೂರೈಕೆ ಮಾಡುತ್ತಿದ್ದಾರೆ.

ತೆಲುಗು ಚಿತ್ರರಂಗದ ಕಲಾವಿದರು ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಟ ಆರಂಭಿಸಿದ್ದು, ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದ ಕಾರ್ಮಿಕರಿಗಾಗಿ 1 ಕೋಟಿ ದೇಣಿಗೆ ನೀಡಿರುವುದಲ್ಲದೆ, ಪ್ರಭಾಸ್ ಪಿಎಂ ಫಂಡ್ ಗೆ 3 ಕೋಟಿ ದೇಣಿಗೆ ನೀಡಿದ್ದಾರೆ. ಪವನ್ ಕಲ್ಯಾಣ್ 1.5 ಕೋಟಿ, ಮಹೇಶ್ ಬಾಬು 1 ಕೋಟಿ, ರಾಮ್ ಚರಣ್ 75 ಲಕ್ಷ, ನಿತಿನ್ 10 ಲಕ್ಷ ಸೇರಿದಂತೆ ಇನ್ನು ಕೆಲವು ಕಲಾವಿದರು ಸಿಎಂ ಅಥವಾ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

ತಮಿಳುನಾಡು ಸಿಎಂ ಪರಿಹಾರ ನಿಧಿಗೆ ಸೂಪರ್ ಸ್ಟಾರ್ ರಜನಿಕಾಂತ್ 1 ಕೋಟಿ, ಸೂರ್ಯ ಹಾಗೂ ಕಾರ್ತಿ ಸಹೋದರರು 1 ಕೋಟಿ, ಅಜಿತ್ ಕುಮಾರ್ 1.25 ಕೋಟಿ ದೇಣಿಗೆ ನೀಡಿದ್ದಾರೆ. ಇನ್ನು ಅಜಿತ್ ಕಾರ್ಮಿಕ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ.
ಸಿನಿ ತಾರೆಯರು ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವು ನೀಡಲು ಮುಂದಾಗಿರುವುದಲ್ಲದೆ ಕೊರೊನಾ ಜಾಗೃತಿ ಕೂಡ ಮೂಡಿಸುತ್ತಿದ್ದು ಮಹಾಮಾರಿ ಯು ಶೀಘ್ರ ದೇಶದಿಂದ ಬಿಟ್ಟು ಹೋಗಲಿ ಎಂದು ಆಶಿಸೋಣ ಅಲ್ಲವೇ..?

Facebook Comments