ನವದೆಹಲಿ, ಫೆ. 2 – ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷೀಣಿಸಿದ್ದು ಸಾವುನ ಪ್ರಮಾಣ ಹೆಚ್ಚುತ್ತಿರುವುದು ಅತಂಕ ಮೂಡಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಂದು ದಿನದಲ್ಲಿ 1,61,386 ಜನರು ಕರೋನ ಸೋಂಕಿಗೆ ಭಾದಿತರಾಗಿದ್ದು ಇದೇ ಅವಯಲ್ಲಿ 1,733 ಮಂದಿ ಕೊನೆಯುಸಿರೆಳೆದಿದ್ದಾರೆ.
ಭಾರತದ ಈವರೆಗೆ ಒಟ್ಟು ಸೋಂಕಿತರ ಪ್ರಕರಣಗಳ ಸಂಖ್ಯೆ 4.16 ಕೋಟಿಗೆ ಏರಿದೆ. ಸಾವಿನ ಸಂಖ್ಯೆ 4,97,975 ಕ್ಕೆ ಏರಿದೆ ಆದರೂ ದೇಶದ ಚೇತರಿಕೆಯ ಪ್ರಮಾಣವು ಶೇಕಡಾ 94.60 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.ಮಹಾರಾಷ್ರ ,ದೆಹಲಿ ,ಕೇರಳದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಜನರಲ್ಲಿ ವಿಶ್ವಾಸ ಮೂಡಿಸಿ ಕೊರೊನಾ ನಿಯಂತ್ರಿಸಲು ಪ್ರಯತ್ನ ಮುಂದುವರೆದಿದೆ.ಮತ್ತಷ್ಟು ಮುತುವರ್ಜಿ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ದೇಶದಲ್ಲಿ ಇದುವರೆಗೆ ಲಸಿಕೆ ನೀಡಿಕೆ ಅಭಿಯಾನ ವೇಗ ಪಡೆದುಕೊಂಡಿದ್ದು ಇಂದಿನ ವರದಿ ಪ್ರಕಾರ 168 ಕೋಟಿ ಜನರು ದಾಟಿದೆ.
ಕಳೆದ ವಾರಾಂತ್ಯದಲ್ಲಿ ಹೆಚ್ಚಾಗಿದ್ದ ಕೊರೊನಾ ಅಬ್ಬರ ಕಳೆದ ಮೂರು ದಿನದಿಂದ ಇಳಿಕೆಯಾಗುತ್ತಿದೆ.ವಿದೇಶದಿಂದ ಬರುವವರಲ್ಲಿ ಕೆಲವರಿಗೆ ಸೋಂಕು ಕಂಡುಬಂದಿದೆ.
