ನಾನಾ ದೇಶಗಳಿಂದ ವಿದೇಶಿಗರ ದಾಂಗುಡಿ, ಬೆಂಗಳೂರಲ್ಲಿ ಹೆಚ್ಚಾಯ್ತು ಕೊರೊನಾ ಆತಂಕ

Social Share

ಬೆಂಗಳೂರು,ಡಿ.28- ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಿಲಿಕಾನ್ ಸಿಟಿಗೆ ಸಾವಿರಾರು ಪ್ರವಾಸಿಗರು ದಾಂಗುಡಿ ಇಡುತ್ತಿರುವುದರಿಂದ ನಗರದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾಲು ಸಾಲು ರಜೆ ಸಿಕ್ಕಿರುವುದರಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದು, ಬಹುತೇಕ ಹೋಟೆಲ್‍ಗಳು ಪ್ರವಾಸಿಗರಿಂದ ತುಂಬಿ ಹೋಗಿದೆ.

ಅನಿವಾಸಿ ಭಾರತೀಯರು ಸೇರಿದಂತೆ ದೇಶ ವಿದೇಶಗಳಲ್ಲಿರುವ ಸಾವಿರಾರು ಮಂದಿ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಪಂಚತಾರಾ ಹೋಟೆಲ್ ಸೇರಿದಂತೆ ರಾಜ್ಯದ ಬಹುತೇಕ ಹೋಟೆಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಹೋಟೆಲ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದ್ದು, ಹೊಸ ವರ್ಷದ ಆರಂಭದ ವೇಳೆಗೆ ರಾಜ್ಯದೆಲ್ಲೇಡೆ ಪ್ರವಾಸಿಗರ ದಂಡೇ ಕಂಡು ಬರಲಿದೆ.ರಾಜ್ಯದಾದ್ಯಂತ ಇರುವ ಶೇ.90 ರಷ್ಟು ಹೋಟೆಲ್‍ಗಳು ಭರ್ತಿಯಾಗಿದ್ದು, ಇದುವರೆಗೂ 56 ಸಾವಿರ ರೂಮುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ಹೊಸ ವರ್ಷ ಆಚರಣೆಗೆ ಬ್ರೇಕ್ ಬಿದ್ದಿತ್ತು, ಹೀಗಾಗಿ ಈ ಬಾರ ಜನ ಸಡಗರದಿಂದ ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಕೊರೊನಾ ನಾಲ್ಕನೆ ಅಲೆ ಸೋಟಗೊಳ್ಳುವ ಸಾಧ್ಯತೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಹೊಸ ವರ್ಷದ ಸಂದರ್ಭದಲ್ಲಿ ಬಸ್, ವಿಮಾನ ಪ್ರಯಾಣ ದರ ದುಬಾರಿಯಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಜನ ತಮ್ಮೂರಿನತ್ತ ಪ್ರಯಾಣ ಬೆಳೆಸುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ಕೊರೊನಾ ಸೋಟ ಸಂಭವಿಸುವ ಸಾಧ್ಯತೆಗಳಿರುವುದು ಹೋಟೆಲ್ ಮಾಲೀಕರ ಆತಂಕವನ್ನು ದ್ವಿಗುಣಗೊಳಿಸಿದೆ.

ಕನ್ನಡದ ಶಕ್ತಿ ಕುಂದಿಸಲು ಸಾಧ್ಯವಿಲ್ಲ : ಸಿಎಂ ಬೊಮ್ಮಾಯಿ

ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ವಿದೇಶಗಳಲ್ಲಿ ಒಂದು ತಿಂಗಳಿಗೂ ಹೆಚ್ಚು ರಜೆ ಇರುವುದು ಹಾಗೂ ಡಿಸಂಬರ್‍ನಲ್ಲಿ ಹೊರ ದೇಶಗಳಲ್ಲಿ ವಿಪರಿತ ಚಳಿ ಇರುವುದರಿಂದ ಅನಿವಾಸಿ ಭಾರತೀಯರು ತಮ್ಮೂರಿನತ್ತ ಮುಖ ಮಾಡುವುದು ವಾಡಿಕೆ.

ಈಗಾಗಲೇ ಶೇ.90 ರಷ್ಟು ಹೋಟೆಗಳು ಭರ್ತಿಯಾಗಿದ್ದರೂ ಇನ್ನು ಹೋಟೆಲ್ ಬುಕ್ಕಿಂಗ್ ಮುಂದುವರೆದಿದೆ. ಹೋಟೆಲ್ ಮಾಲೀಕರುಗಳು ಹೊಸ ವರ್ಷ ಬರ ಮಾಡಿಕೊಳ್ಳಲು ಸಕಲ ಸಿದ್ದತೆ ಆರಂಭಿಸಿದ್ದಾರೆ. ಆದರೆ, ದೇಶ-ವಿದೇಶಗಳ ಸಾವಿರಾರು ಮಂದಿ ನಗರಕ್ಕೆ ಆಗಮಿಸುತ್ತಿರುವುದರಿಂದ ಹೋಟೆಲ್‍ಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮತ್ತೆ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿವೆ.

ಜಮ್ಮು-ಶ್ರೀನಗರ ಹೆದ್ಧಾರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು

ಸೋಂಕು ಹರಡುವ ಭೀತಿ : ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ 12 ಮಂದಿಗೆ ಈಗಾಗಲೆ ಕೊರೊನಾ ಸೋಂಕು ತಗುಲಿರುವುದರಿಂದ ಅವರ ಸಂಪರ್ಕದಲ್ಲಿದ್ದ ಹಲವಾರು ಮಂದಿಯಿಂದ ಕೊರೊನಾ ಸೋಂಕು ಹರಡುವ ಭೀತಿ ಇದೀಗ ಎದುರಾಗಿದೆ.

ಸೋಂಕು ತಗುಲಿರುವ 12 ಮಂದಿಯ ಮಾದರಿಯನ್ನು ಜಿನೋಮ್ ಸಿಕ್ವೇನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಒಂದು ವೇಳೆ ಸೋಂಕಿತರಿಗೆ ಎಫ್‍ಬಿ.7 ರೂಪಾಂತರಿ ಸೋಂಕು ತಗುಲಿರುವುದು ಕಂಡು ಬಂದರೆ ಬಾರಿ ಪ್ರಮಾದ ಎದುರಿಸಬೇಕಾಗುತ್ತದೆ.

Bengaluru, amid, China, Covid, surge, worry,

Articles You Might Like

Share This Article