BREAKING : ಕೊರೋನಾ ಕುರಿತ ಬಿಗ್ ನ್ಯೂಸ್..! ಬೆಂಗಳೂರಿಗರಿಗೆ ಶಾಕ್..!

ಬೆಂಗಳೂರು,ಏ.5- ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ನಾಳೆಯಿಂದ ಗಡಿ ದಾಟುವ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದು ಬೆಂಗಳೂರುನಗರ ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿದ್ದು, ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಪಾಲಿಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ನಾಳೆ ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಿಂದ ಹಲವರು ಹೊರ ಹೋಗುತ್ತಾರೆ. ಇಂತಹ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಅವಕಾಶ ಕೊಡಲಾಗುವುದು.ಒಂದು ವೇಳೆ ಪಾಸಿಟಿವ್ ಬಂದರೆ ವಾಪಸ್ ಕಳುಹಿಸಲಾಗುವುದು ಎಂದರು.

ಬಿಬಿಎಂಪಿ, ಅಬಕಾರಿ, ಪೊಲೀಸ್ ಹಾಗೂ ಆಯಾಯ ಜಿಲ್ಲಾಡಳಿತ ವತಿಯಿಂದ ಕೋವಿಡ್ ತಪಾಸಣೆ ಮಾಡಲಾಗುವುದು. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕೆಂದು ಅವರು ಕೋರಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದ ಎಷ್ಟೆಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಗಮನಿಸಲಾಗುತ್ತಿದೆ. ಆನೇಕಲ್ ತಾಲ್ಲೂಕಿನಲ್ಲಿ 236 ಪ್ರಕರಣ ನಿನ್ನೆ ದಾಖಲಾಗಿದೆ. ಶೇ.50ರಷ್ಟು ಪಾಸಿಟಿವ್ ವರದಿ ಬರುತ್ತಿದೆ. ಪ್ರಾಥಮಿಕ , ದ್ವಿತೀಯ ಸಂಪರ್ಕಿತರನ್ನು ಕೂಡ ಪತ್ತೆ ಮಾಡಲಾಗುತ್ತಿದೆ.

ಅಂತಾರಾಜ್ಯ ಸಂಪರ್ಕಿಸುವ ಅತ್ತಿಬೆಲೆಯಲ್ಲಿ ಚೆಕ್‍ ಪೋಸ್ಟ್ ಕೂಡ ತೆರೆಯಲಾಗಿದೆ. ವಾಹನಗಳ ತಪಾಸಣೆಯನ್ನು ಮಾಡಲಾಗುತ್ತಿದೆ. 36 ಪ್ರಾಥಮಿಕ ಆರೋಗ್ಯ ಕೇಂದ್ರ, 3 ಸಮುದಾಯ ಕೇಂದ್ರ, 60 ಮೊಬೈಲ್ ಟೀಮ್‍ಗಳಿವೆ. ಕೋವಿಡ್ ಪರಿಕರಗಳಿಗೆ ಕೊರತೆಯಿಲ್ಲ.

ಆಶಾ ಕಾರ್ಯಕರ್ತೆಯರು ಸಾವಿರಕ್ಕೆ ಒಬ್ಬರಂತೆ ಇದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗಳಲ್ಲಿ ಸರ್ವೆ ಮಾಡಲಿದ್ದಾರೆ. ಅಲ್ಲದೆ ಮೆಡಿಕಲ್ ಸ್ಟೋರ್‍ಗಳಲ್ಲಿ ಜ್ವರ, ಕೆಮ್ಮು ಮಾತ್ರೆಗಳನ್ನು ಖರೀದಿಸುವವರ ಮಾಹಿತಿಯನ್ನು ಪಡೆಯಲಾಗುವುದು. ಜಾತ್ರೆ, ಸಭೆ, ಸಮಾರಂಭಗಳನ್ನು ನಿಷೇಸಲಾಗಿದೆ ಎಂದರು.

ಪಾಲಿಕೆ ಆಯುಕ್ತ ಗೌರವ ಗುಪ್ತ ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಪಾಲಿಕೆಯಿಂದ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪಾರ್ಟ್‍ಮೆಂಟ್, ಕೈಗಾರಿಕೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ. ಶೇ.20ರಷ್ಟುಬ ಬೆಡ್‍ಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.

ಸಾರ್ಸ್ ಎಂಬ ಸಂಸ್ಥೆ ಬೆಡ್ ಒದಗಿಸಲಿದೆ. ಕೋವಿಡ್ ಕೇರ್ ಸೆಂಟರ್‍ಗಳ ಸಹ ಹೆಚ್ಚಳ ಮಾಡಲಾಗುವುದು. ಕೊರೊನಾ ಲಕ್ಷಣಗಳು ಹಾಗೂ ಚಿಕಿತ್ಸೆ ಬೇಕಾದಲ್ಲಿ ಅಗತ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

Sri Raghav

Admin