ಬೆಂಗಳೂರಿನಲ್ಲಿ ಶೇ.10ರ ಗಡಿ ದಾಟಿದ ಕೊರೊನಾ ಪಾಸಿಟಿವಿಟಿ ರೇಟ್..!

Social Share

ಬೆಂಗಳೂರು,ಜ.10-ನಗರದಲ್ಲಿ ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದರಿಂದ ಸೋಂಕು ನಿಯಂತ್ರಣ ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಿಗಿಂತ ಶೇ.80 ರಷ್ಟು ಹೆಚ್ಚು ಪ್ರಕರಣಗಳು ರಾಜಧಾನಿಯಲ್ಲಿ ಪತ್ತೆಯಾಗುತ್ತಿರುವುದರಿಂದ ಪರಿಸ್ಥಿತಿ ಕೈ ಮೀರಿದೆ ಎನ್ನಲಾಗಿದೆ. ಯಾವ ನಗರದಲ್ಲಿ ಪಾಸಿಟಿವಿಟಿ ದರ ಶೇ.5ರ ಗಡಿ ದಾಟಿದರೆ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿತ್ತು.
ಈ ಎಚ್ಚರಿಕೆ ಬೆನ್ನಲ್ಲೆ ರಾಜಧಾನಿಯಲ್ಲಿ ಕೊರೊನಾ ಪಾಸಿಟಿವಿಟಿ ದರೆ ಶೇ.5ರ ಗಡಿ ದಾಟಿದ ನಂತರವೇ ನೈಟ್ ಕಫ್ರ್ಯೂ, ವಿಕೇಂಡ್ ಕಫ್ರ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

Articles You Might Like

Share This Article