ಪ್ರತಿ ವಾರ್ಡ್‍ನಲ್ಲೂ ಕೊರೊನಾ ಪರೀಕ್ಷಾ ಕೇಂದ್ರ ಆರಂಭ

Social Share

ಬೆಂಗಳೂರು, ಜ.5- ಕೊರೊನಾ ತಪಾಸಣೆಗೆ ಯಾವುದೇ ಅಡ್ಡಿ-ಆತಂಕ ಎದುರಾಗಬಾರದು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ವಾರ್ಡ್‍ಮಟ್ಟದ ಟ್ರಯಾಜನ್ ಸೆಂಟರ್‍ಗಳನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ಲಕ್ಷಣ ಕಂಡುಬಂದವರು ಟ್ರಯಾಜನ್ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ವೈದ್ಯರು ಸೂಚಿಸಿದವರಿಗೆ ಮಾತ್ರ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದರು. ವಾರ್ಡ್ ಮಟ್ಟದ ಟ್ರಯಾಜನ್ ಸೆಂಟರ್‍ಗಳ ಜತೆಗೆ ಮೊಬೈಲ್ ಟ್ರಯಾಜನ್ ಸೆಂಟರ್‍ಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ರೋಗ ತಪಾಸಣೆ ಮಾಡಿಸಿಕೊಂಡ ಶೇ.99ರಷ್ಟು ಮಂದಿಗೆ ಆಸ್ಪತ್ರೆ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇರುವವರಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಲಿದ್ದಾರೆ ಎಂದು ಅವರು ಹೇಳಿದರು.
ತಪಾಸಣೆ ಸಂದರ್ಭದಲ್ಲಿ ಸೋಂಕು ಪತ್ತೆಯಾದವರು ತಮ್ಮ ಮನೆಗಳಲ್ಲೇ ಐಸೊಲೇಷನ್‍ನಲ್ಲೇ ಇದ್ದು, ಸೋಂಕು ಮುಕ್ತರಾಗಬಹುದು. ಯಾರಿಗೆ ಮನೆಗಳಲ್ಲಿ ಐಸೊಲೇಷನ್ ವ್ಯವಸ್ಥೆ ಇರುವುದಿಲ್ಲವೋ ಅಂತಹವರು ಕೋವಿಡ್ ಕೇರ್ ಸೆಂಟರ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಈಗಾಗಲೇ ಸೋಂಕು ತಗುಲಿರುವ ಶೇ.60ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕೇವಲ 300 ಮಂದಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೊಳಪಟ್ಟ ಶೇ.90ರಷ್ಟು ಮಂದಿ ಜನರಲ್ ಬೆಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಬೆಡ್ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಒಂದು ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸಬೇಕು. ಜನಸಂದಣಿ ಪ್ರದೇಶಗಳಿಂದ ದೂರ ಉಳಿಯಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಾಗ ಮಾತ್ರ ನಿಮಗೆ ರಕ್ಷಾ ಕವಚ ದೊರೆಯಲಿದೆ ಎಂದರು. ನಗರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದನ್ನು ಮನಗಂಡು ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ನೈಟ್‍ಕಫ್ರ್ಯೂ ಮುಂದುವರಿಯಲಿದೆ. ಜತೆಗೆ ವೀಕೆಂಡ್ ಕಫ್ರ್ಯೂ ಇರಲಿದೆ ಎಂದು ಅವರು ಹೇಳಿದರು.
ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಕೇವಲ ಶೇ.50ರಷ್ಟು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತಹ ಸ್ಥಳಗಳಿಗೆ ತೆರಳುವವರು ಕಡ್ಡಾಯವಾಗಿ ಡಬಲ್ ವ್ಯಾಕ್ಸಿನೇಷನ್ ಪಡೆದುಕೊಂಡಿರಲೇಬೇಕು ಎಂಬ ನಿಯಮವಿದ್ದು, ಸಭೆ-ಸಮಾರಂಭಗಳಲ್ಲೂ ನಿಗದಿಪಡಿಸಿರುವ ಸಂಖ್ಯೆಗಿಂತ ಹೆಚ್ಚಿನ ಜನ ಸೇರಬಾರದು ಎಂದು ಗೌರವ್ ಗುಪ್ತ ಮನವಿ ಮಾಡಿದರು.

Articles You Might Like

Share This Article