ನವದೆಹಲಿ, ಜ.10- ದೇಶವೇ ಆತಂಕದ ಕಣ್ಣುಗಳಿಂದ ನೋಡುತ್ತಿರುವ ಕೊರೊನಾ ಸೋಂಕು ಸುಪ್ರೀಂಕೋರ್ಟ್‍ನ ಮೂವರು ನ್ಯಾಯಾೀಧಿಶರಿಗೆ ತಗುಲಿದೆ. ಈ ಮೂಲಕ ಮೂರನೇ ಅಲೆಯಲ್ಲಿ ಸುಪ್ರೀಂಕೋರ್ಟ್‍ನ ಒಟ್ಟು ಒಂಬತ್ತು ಮಂದಿ ನ್ಯಾಯಾೀಧಿಶರು ಸೋಂಕಿಗೆ ಸಿಲುಕಿದಂತಾಗಿದೆ.
ಸರ್ವೋಚ್ಚ ನ್ಯಾಯಾಲಯದ ಒಟ್ಟು 250 ಮಂದಿ ಸಿಬ್ಬಂದಿಗೂ ಸೋಂಕು ತಗುಲಿದೆ, ಅವರಲ್ಲಿ ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಉಳಿದವರು ಮನೆಯಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಪ್ರೀಂಕೋರ್ಟ್‍ನ ಪ್ರಧಾನ ಕಾರ್ಯದರ್ಶಿಯವರಿಗೂ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರೆಸೇನಾ ಪಡೆಯ 600ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಚುನಾವಣೆ ಸೇರಿದಂತೆ ಇತರೆ ತುರ್ತು ರಕ್ಷಣಾ ಕಾರ್ಯಗಳಿಗೆ ಬಳಕೆ ಮಾಡಲಾಗುವ ಕೇಂದ್ರ ಮೀಸಲು ಪೆÇಲೀಸ್ ಪಡೆಯ 121 ಮಂದಿಗೆ ಸೋಂಕು ತಗುಲಿದೆ. ಗಡಿ ರಕ್ಷಣಾ ಪಡೆಯ 98 ಮಂದಿಗೆ, ವಿಶೇಷ ಭದ್ರತಾಪಡೆಯ 113 ಮಂದಿಗೆ, ಐಟಿಬಿಪಿಯ 17, ಎನ್‍ಡಿಆರ್‍ಎಫ್ನ್ 11, ಗಣ್ಯರಿಗೆ ವಿಶೇಷ ಭದ್ರತೆ ಒದಗಿಸುವ ಎನ್‍ಎಸ್‍ಐ ಪಡೆಯ ಐವರಿಗೆ ಕೊರೊನಾ ಸೋಂಕು ತಗುಲಿದೆ.
ವಿಮಾನ ನಿಲ್ದಾಣ ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ಭದ್ರತೆ ಒದಗಿಸುವ ಕೇಂದ್ರ ಕೈಗಾರಿಕಾ ಮೀಸಲು ಪಡೆಯ 253 ಮಂದಿಗೆ ಸೋಂಕು ತಗುಲಿದೆ. ಇದು ಅರೆಸೇನಾ ಪಡೆಗಳಲ್ಲೇ ಹೆಚ್ಚು ಮಂದಿಗೆ ಸೋಂಕು ಅನುಭವಿಸಿರುವ ದಳವಾಗಿದೆ.
ತೆಲಂಗಾಣದ ವಾರಂಗಲ್ ಜಿಲ್ಲೆಯ ಕಕತಿಯ ಮೆಡಿಕಲ್ ಕಾಲೇಜಿನಲ್ಲಿ 280 ವಿದ್ಯಾರ್ಥಿಗಳನ್ನು ಆಂಟಿಜನ್ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ 23 ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಸೋಂಕಿತರು ಎಂದು ತಿಳಿದು ಬಂದಿದೆ.
ದೆಹಲಿಯ ಮೂರು ಜೈಲುಗಳಲ್ಲಿ 46 ಮಂದಿ ಖೈದಿಗಳು ಹಾಗೂ 43 ಅಧಿಕಾರಿಗಳು ಕೋವಿಡ್ 19ಸೋಂಕಿನಿಂದ ಭಾದಿತರಾಗಿದ್ದಾರೆ. ಸೋಂಕಿತರೆಲ್ಲರ ಆರೋಗ್ಯ ಉತ್ತಮವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಹಳಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ 29, ಮಂಡೋಲಿ ಜೈಲಿನಲ್ಲಿ 17 ಮಂದಿ ಸೇರಿ ನಿನ್ನೆ ಒಂದೇ ದಿನ 29 ಮಂದಿ ಖೈದಿಗಳು ಸೋಂಕಿತರಾಗಿದ್ದಾರೆ. ಅಧಿಕಾರಿಗಳ ಪೈಕಿ 25 ಮಂದಿ ತಿಹಾರ್ ಜೈಲಿನವರಾಗಿದ್ದರೆ, 12 ಮಂದಿ ಹೋಹಿಣಿ ಜೈಲಿನವರಾಗಿದ್ದಾರೆ. ಮಂಡೋಲಿ ಜೈಲಿನ ಆರು ಮಂದಿ ಸೋಂಕಿತರಾಗಿದ್ದಾರೆ ಎಂದು ತಿಳಿಸಲಾಗಿದೆ.
