24 ಗಂಟೆಗಳಲ್ಲಿ ದೇಶದಾದ್ಯಂತ 20 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ

ನವದೆಹಲಿ, ಡಿ.28- ದೇಶದಲ್ಲಿ ಒಂದೇ ದಿನ 20 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಮೂಲಕ ಕೋವಿಡ್-19 ಸಂಖ್ಯೆ 1,02,07,871 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯದ ಮಾಹಿತಿ ತಿಳಿಸಿದೆ. ಕೊರೊನಾ ಸೋಂಕಿನಿಂದ ಸುಧಾರಣೆ ಕಂಡವರ ಸಂಖ್ಯೆ 97.82 ಲಕ್ಷಕ್ಕೆ ತಲುಪುವುದರೊಂದಿಗೆ ಆರೋಗ್ಯ ಚೇತರಿಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬಂದಿದೆ.

ಇದುವರೆಗಿನ ಒಟ್ಟಾರೆ ಸಾವಿನ ಸಂಖ್ಯೆ 1,47,901 ಆಗಿದ್ದು, 279 ಹೊಸ ಕೇಸ್‍ಗಳ ಸೇರ್ಪಡೆಗೊಂಡಿವೆ. ಇದರೊಂದಿಗೆ ರಾಷ್ಟ್ರೀಯ ಚೇತರಿಕೆ ದರ 95.83 ರಷ್ಟಾಗಿದೆ ಎಂದು ತಿಳಿದು ಬಂದಿದೆ. ದೇಶಾದ್ಯಂತ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 1,47,901ರಷ್ಟಾಗಿದ್ದು, ಅದರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ 49,255 ಮಂದಿ ಸಾವನ್ನಪ್ಪುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನ ತಮಿಳುನಾಡಿನದ್ದಾಗಿದ್ದು 12,069 ಮಂದಿ ಬಲಿಯಾಗಿದ್ದಾರೆ.

ಕರ್ನಾಟದಲ್ಲಿ ಸರ್ಕಾರ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಸಹ 12,062 ಮಂದಿ ಕೋವಿಡ್-19ಗೆ ಬಲಿಯಾಗಿರುವುದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವರದಿ ಮಾಡಿದೆ.