ಇಲ್ಲಿವೆ ಕೋವಿಡ್-19 ಮತ್ತು ಶೀತಜ್ವರದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು

Spread the love

ಬೆಂಗಳೂರು, ಜ.4- ಚಳಿಗಾಲ ಬಂತೆಂದರೆ ಸಾಕು ಬಹಳಷ್ಟು ಜನರ ಆರೋಗ್ಯದ ಮೇಲೆ ಸಣ್ಣ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಶೀತಜ್ವರ ಕಾಣಿಸಿಕೊಳ್ಳುವುದು ಸಹಜ.  ಈ ಶೀತಜ್ವರ (ಫ್ಲೂ)ಕ್ಕೆ ವೈದ್ಯರು ನೀಡುವ ಲಸಿಕೆಗಳು ಕೊಂಚ ಪರಿಣಾಮಬೀರಿದರೂ ಪ್ರತಿಶತ 100ರಷ್ಟು ಪರಿಣಾಮಕಾರಿಯಲ್ಲ. ಆದರೂ, ಫ್ಲೂ ಪೀಡಿತ ವ್ಯಕ್ತಿಯ ಶೀತಜ್ವರ ನಿಯಂತ್ರಿಸಲು ಲಸಿಕೆ ಶಾಟ್ಸ್‍ಗಳನ್ನು ನೀಡಬೇಕಾಗುತ್ತದೆ.

ಫ್ಲೂ ಶಾಟ್ಸ್‍ಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರಿಗೆ ಮನವೊಲಿಸುವುದು ಮಾತ್ರ ಒಂದು ಸವಾಲಾಗಿದೆ. ಸಾಮಾನ್ಯವಾಗಿ ಶೀತಜ್ವರ ಕಾಯಿಲೆ ಸಹಿಸಲು ಸಾಧ್ಯವಾಗುವಂತಿದ್ದರೂ ಸಹ ವಯಸ್ಸಾದ ಅಥವಾ ಇಮ್ಯೂನಿಟಿ ಕಡಿಮೆ ಇರುವ ಮಂದಿಯಲ್ಲಿ ಸೋಂಕಿನ ಲಕ್ಷಣ ಹೆಚ್ಚಾಗಿರುತ್ತದೆ. ಒಮ್ಮೊಮ್ಮೆ ರೋಗ ಮಾರಕವಾಗುವ ಸಾಧ್ಯತೆಯೂ ಇರುತ್ತದೆ.

ಕಳೆದ ಬಾರಿ ಅಮೆರಿಕದಲ್ಲಿ ಸುಮಾರು 4 ಲಕ್ಷ ಜನರಲ್ಲಿ ಫ್ಲೂ ಜ್ವರ ಆವರಿಸಿತ್ತು, ಅದರಲ್ಲಿ ಸುಮಾರು 22 ಸಾವಿರ ಮಂದಿ ಸಾವನ್ನಪ್ಪಿದ್ದ ಉದಾಹರಣೆ ಇದೆ. ಆದರೆ, ಈ ಚಳಿಗಾಲದಲ್ಲಿ ಶೀತಜ್ವರ ವೈರಾಣುವಿಗೆ ಸವಾಲೊಡ್ಡುವ ಹಾಗೂ ಸಾಂಕ್ರಾಮಿಕ ರೋಗಕ್ಕೆ ಉತ್ತೇಜನ ನೀಡುವ ಕೋವಿಡ್-19 ವೈರಸ್ ಹರಡಿದೆ. ವಿಶ್ವಾದ್ಯಂತ ಕೋಟ್ಯಂತರ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟುಮಾಡಿದೆ.

ಈ ಎರಡೂ ರೋಗಗಳ ವೈರಾಣು ಹರಡುವಿಕೆ ಲಕ್ಷಣಗಳು ಸೀನು, ಕೆಮ್ಮು ಮತ್ತು ಉಸಿರಾಟದಿಂದ ಹೊರಹೊಮ್ಮುವ ಸಿಂಪಡಿಕೆಯಿಂದ ಉಂಟಾಗುತ್ತವೆ. ವ್ಯಕ್ತಿ, ವ್ಯಕ್ತಿ ನಡುವಿನ ಸಂಪರ್ಕದಿಂದಲೂ ವೈರಸ್ ಹರಡುತ್ತವೆ. ಆದರೆ, ಶೀತಜ್ವರದ (ಫ್ಲೂ) ಬಗ್ಗೆ ಸಂಶೋಧಕರಿಗೆ ಕೊಂಚ ಪ್ರಮಾಣದಲ್ಲಿ ತಿಳಿದಿದ್ದರೂ ಕೊರೊನಾ ವೈರಸ್, ಸಾರ್ಸ್ ಕೊ-2 ಕಪ್ಪು ಪಟ್ಟಿಗೆ ಸೇರಿದ್ದಾಗಿವೆ. ಈ ಎರಡೂ ರೋಗಕಾರಕಗಳು ಒಂದೊಕ್ಕೊಂದು ಘರ್ಷಿಸುತ್ತವೆ ಎಂಬುದು ಊಹಿಸಬಹುದಷ್ಟೇ. ಚಳಿಗಾಲದಲ್ಲಿ ಈ ವೈರಾಣುಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ವಿವರಣೆ ಇಲ್ಲಿದೆ.

-ಫ್ಲೂ ಮತ್ತು ಕೊರೊನಾ ಎರಡೂ ವೈರಾಣುಗಳು ಚಳಿಗಾಲದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಸಹಜವಾಗಿ ಈ ವಾತಾವರಣ ಜನರನ್ನು ಹತ್ತಿರ ತರುತ್ತದೆ. ನ್ಯೂಯಾರ್ಕ್ ನಗರದ ಆರೋಗ್ಯ ಆಯುಕ್ತ ಡಾ. ಡೇವಿಡ್ ಚೋಕ್ಶಿ ಅವರು ಈ ಎರಡೂ ವೈರಸ್‍ಗಳು ಸೋಂಕಿತರಲ್ಲಿ ತೀವ್ರತರ ಉಸಿರಾಟ ಸಮಸ್ಯೆಯನ್ನು ತಂದೊಡ್ಡುತ್ತವೆ ಎಂದು ಚಿಂತನೆಗೊಳಗಾಗಿ ಮಾತನಾಡಿದ್ದಾರೆ. ಆದರೆ, ಕೋವಿಡ್-19 ಪಾಸಿಟಿವ್‍ಗೊಳಗಾದ ವ್ಯಕ್ತಿಯ ಉಸಿರಾಟದಲ್ಲಿ ವ್ಯತ್ಯಾಸವುಂಟಾಗಿ ತುರ್ತು ಚಿಕಿತ್ಸೆ (ಐಸಿಯು)ಗೆ ಒಳಗಾಗಬೇಕಾಗುತ್ತದೆ.

ಜಾನ್ಸ್ ಹಾಪ್‍ಕಿನ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇನ್‍ಫ್ಲೂಯೆನ್ಜ ಸಂಶೋಧನೆ ಮತ್ತು ಕಣ್ಗಾವಲು ಕೇಂದ್ರದ ಸಹ ನಿರ್ದೇಶಕ ಡಾ. ಆಂಡ್ರ್ಯೂ ಪೆಕೊಜ್ ಅವರು, ಚಳಿಗಾಲದಲ್ಲಿ ಈ ಎರಡೂ ವೈರಾಣುಗಳಿಂದ ಉಂಟಾಗುವ ದುರಂತವನ್ನು ತಡೆಗಟ್ಟಲು ಮೊದಲು ಸೋಂಕಿತರು ಧೈರ್ಯವಾಗಿ ಫ್ಲೂ ಶಾಟ್‍ಗಳನ್ನು ತೆಗೆದುಕೊಳ್ಳಲು ಮುಂದೆ ಬರಬೇಕು. ಜ್ವರ ಬಂದ ತಕ್ಷಣ ಈ ಕಾರ್ಯ ಮಾಡಬೇಕಾಗುತ್ತದೆ.

ಔಷಧ ಮತ್ತು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಥೆರಪಿಯ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ತರಬಹುದಾಗಿದೆ. ಶೀತಜ್ವರಕ್ಕೆ ಹಾಕುವ ಲಸಿಕೆ ಶೇ.50 ರಷ್ಟು ಪರಿಣಾಮ ಬೀರುತ್ತದೆ. ಆದರೆ, ಯಾವುದೇ ಅಪಾಯ ಸಂಭವಿಸುವ ಮೊದಲು ಅರ್ಧದಷ್ಟು ಕಾಯಿಲೆ ವಾಸಿಯಾದರೆ ಒಳಿತಲ್ಲವೇ? ನಮ್ಮಲ್ಲಿ ಶೀತಜ್ವರಕ್ಕೆ ಲಸಿಕೆ ಇದೆ. ಇದು ಕೂಡ ಒಂದು ರೀತಿ ಸಾರ್ವಜನಿಕರ ರಕ್ಷಣೆಗೆ ಹೆಚ್ಚುವರಿ ಪದರವಾಗಿದೆ. ಅಲ್ಲದೆ, ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿ ಶೀತಜ್ವರ ಚಟುವಟಿಕೆ ಕಡಿಮೆ ಇದ್ದು, ಪ್ರಪಂಚದ ಇತರ ಭಾಗಗಳಲ್ಲಿ ಪರಿಣಾಮಕಾರಿಯಾಗಿ ಆತಂಕದ ಛಾಯೆ ಮೂಡಿದೆ. ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳ ಕೆಲವು ದೇಶಗಳಲ್ಲಿ ಶೀತಜ್ವರ ಪ್ರಕರಣಗಳು ಜಾಸ್ತಿಯಾಗಿವೆ. ಅಲ್ಲಿ ಹೆಚ್3ಎನ್2 ಎನ್ನುವ ವೈರಾಣುಗಳು ಹೆಚ್ಚಾಗಿ ಕಂಡುಬಂದಿವೆ. ಇವು ಇತರ ವೈರಸ್ ಜ್ವರ ತಳಿಗಳಿಗಿಂತ ಹೆಚ್ಚು ತೀವ್ರವಾದ ಕಾಯಿಲೆ ಗುರಿಪಡಿಸುತ್ತವೆ. ಆಗ್ನೇಯ ಏಷ್ಯಾ ವೈರಸ್ ಇತರ ದೇಶಗಳ ಹಾಗೂ ಅಮೆರಿಕದ ಮೇಲೆ ಪರಿಣಾಮಬೀರಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ಸ್ ಇನ್‍ಫ್ಲೂಯೆನ್ಜ ವಿಭಾಗದ ಮುಖ್ಯ ಆರೋಗಾಧಿಕಾರಿ ಡಾ. ಟಿಮ್ ಉಯೆಕಿ ಅಭಿಪ್ರಾಯಪಟ್ಟಿದ್ದಾರೆ.

ಇವರ ಪ್ರಕಾರ ವ್ಯಕ್ತಿಯೊಬ್ಬನಲ್ಲಿ ಫ್ಲೂ ಮತ್ತು ಕೋವಿಡ್-19 ಸೋಂಕು ಎರಡೂ ಬರಲು ಸಾಧ್ಯವಿದೆ. ಬಹಳಷ್ಟು ದೇಶಗಳಲ್ಲಿ ಈ ಸಹ-ಸೋಂಕುಗಳು ಸಂಭವಿಸಿವೆ. ಅಲ್ಲದೆ, ಎರಡು ಸೋಂಕುಗಳಲ್ಲಿ ಯಾವ ವೈರಸ್‍ನಿಂದ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಆದರೆ, ಸೋಂಕಿತ ವ್ಯಕ್ತಿ ಮೇಲೆ ಸಾಕಷ್ಟು ಪರಿಣಾಮವಾಗುವುದಂತು ನಿಜ. ಹೊಸದಾಗಿ ಹರಡಿರುವ ಕೊರೊನಾ ಸೋಂಕು ಬಹಳ ಪರಿಣಾಮಕಾರಿಯಾಗಿರುವುದಂತೂ ನಿಜ. ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಲ್ಲಿ ಹಿಂಜರಿಯಬಾರದು ಎಂದಿದ್ದಾರೆ.

ಫ್ಲೂ ಅಥವಾ ಕೋವಿಡ್-19 ಎಂದು ಹೇಗೆ ಗುರುತಿಸುವುದು ಎಂದರೆ, ಎರಡು ವೈರಾಣುಗಳ ಇನ್ಫೆಕ್ಷನ್ ಲಕ್ಷಣಗಳು ಒಂದೇ ರೀತಿ ಇರುತ್ತವೆ ಹಾಗೂ ವೈದ್ಯರು ಚಿಕಿತ್ಸೆ ನೀಡುವುದು ಕೂಡ ಒಂದೇ ರೀತಿ ಇರುತ್ತದೆ. ಶೀತಜ್ವರ ವೈರಸ್‍ಗಳು ಬೇಗನೆ ಸಾಯಬಹುದು. ಆದರೆ, ಕೋವಿಡ್-19 ವೈರಾಣು ಬೇಗನೆ ಚಿಕಿತ್ಸೆಯಿಂದ ಸಾಯುವುದಿಲ್ಲ. ಸೋಂಕಿತ ವ್ಯಕ್ತಿಯಲ್ಲಿ ಇಮ್ಯೂನಿಟಿ ಕಡಿಮೆ ಮಾಡುತ್ತವೆ. ಆದ್ದರಿಂದ ರೋಗಿಯಲ್ಲಿ ಇಮ್ಯೂನಿಟಿ ಹೆಚ್ಚು ಮಾಡಲು ಹಾಗೂ ವೈರಾಣು ಶಕ್ತಿ ಕುಂದಿಸಲು, ಇತರರಿಗೆ ವೈರಸ್ ಹರಡಂತೆ ತಡೆಗಟ್ಟಲು ಸಾರ್ವಜನಿಕರಿಂದ ಪ್ರತ್ಯೇಕಿಸಿ ಕ್ವಾರಂಟೈನ್ ಮಾಡುವ ಮೂಲಕ ಕಾಯಿಲೆ ಗುಣಪಡಿಸಲು ಸಾಧ್ಯವಾಗುತ್ತದೆ.

ವೈರಾಣು ಪತ್ತೆ ಹೇಗೆ: ಎರಡೂ ವೈರಾಣುಗಳ ಪತ್ತೆಯನ್ನು ಮೂಗಿನ ಹೊಳ್ಳೆಯ ಅಥವಾ ಗಂಟಲ ದ್ರವ ತೆಗೆದುಕೊಂಡು (ಸ್ವಾಬ್ ಟೆಸ್ಟ್) ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವ ಮೂಲಕ ಪತ್ತೆ ಹಚ್ಚಬಹುದು. ವೈರಾಣು ಸೂಕ್ಷ್ಮವಾಗಿದ್ದರೆ ಆರ್‍ಟಿ-ಪಿಸಿಆರ್ ಟೆಸ್ಟ್ ಅಗತ್ಯವಿರುತ್ತದೆ.

ಫ್ಲೂ ಲಸಿಕೆ ಮತ್ತು ಕೋವಿಡ್-19 ಒಂದೇ ಆಗಲು ಸಾಧ್ಯವಿಲ್ಲ ಹಾಗೂ ಎರಡನ್ನೂ ಒಂದೇ ಲಸಿಕೆಯಿಂದ ವಾಸಿಮಾಡಲು ಸಾಧ್ಯವಿಲ್ಲ. ಕಾರಣ ಎರಡೂ ಬೇರೆ ಬೇರೆ ವೈರಾಣುಗಳಾಗಿದ್ದು, ಪ್ರತಿಯೊಂದು ಲಸಿಕೆ ಅದರದ್ದೇ ಆದ ನಿರ್ದಿಷ್ಟ ವೈರಸ್ ಮೇಲೆ ದಾಳಿ ನಡೆಸಲು ಹಾಗೂ ಪ್ರತಿ ರಕ್ಷಣಾ (ಇಮ್ಯೂನ್ ಸಿಸ್ಟಂ) ವ್ಯವಸ್ಥೆಗೆ ಅನುಗುಣವಾಗಿ ಪರಿಣಾಮಬೀರಲು ವಿನ್ಯಾಸಗೊಳಿಸಲಾಗಿದೆ.

ಫ್ಲೂ ವ್ಯಾಕ್ಸಿನ್ ಮತ್ತು ಕೋವಿಡ್-19 ವ್ಯಾಕ್ಸಿನ್ ಅನ್ನು ಅಪಾಯಕಾರಿ ಎಂದು ಹೇಳಲಾಗುವುದಿಲ್ಲ. ಆದರೆ, ಒಂದೊಂದು ವ್ಯಾಕ್ಸಿನ್ ಒಂದೊಂದು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರೆ, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮಾರ್ಚ್ ಅಥವಾ ಏಪ್ರಿಲ್ ಒಳಗೆ ಸಂಶೋಧಕರು ಕೋವಿಡ್-19ಗೆ ಹೊರತಂದಿರುವ ಲಸಿಕೆ ಎಷ್ಟು ಪರಿಣಾಮಕಾರಿ ಕೆಲಸ ಮಾಡಬಲ್ಲದು ಎಂಬುದು ಇನ್ನಷ್ಟೇ ರುಜುವಾತಾಗಬೇಕಿದೆ. ಅಲ್ಲಿಯವರೆಗೆ ಸಾರ್ವಜನಿಕರು ಕೋವಿಡ್-19ಗಾಗಿ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸುವುದು ಒಳಿತು.

ಆಗಾಗ್ಗೆ ಸೋಪಿನಿಂದ ಕೈತೊಳಿದುಕೊಳ್ಳುವುದು, ಮಾಸ್ಕ್ ಧರಿಸುವುದು, ಇತರರಿಂದ ಐದರಿಂದ ಆರು ಅಡಿಗಳ ಅಂತರ ಕಾಯ್ದುಕೊಳ್ಳುವುದು, ಸಾರ್ವಜನಿಕ ಸಭೆ, ಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೂರವಿರಬೇಕು ಎಂಬುದನ್ನು ಪಾಲಿಸಬೇಕಿದೆ. ಇದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದಾಗಿದೆ.

Facebook Comments