ಭಾರತದಲ್ಲಿ ಕೋವಿಡ್-19 ಮೃತರ ಸಂಖ್ಯೆ ಗಣನೀಯ ಇಳಿಕೆ

ನವದೆಹಲಿ, ಜ.25- ದೇಶದಲ್ಲಿ ಕೊರೊನಾ ವೈರಾಣು ಸೋಂಕಿನ ಸಾವುಗಳ ಸಂಖ್ಯೆ ಕಳೆದ ಎಂಟು ತಿಂಗಳಲ್ಲಿ ಗಣನೀಯವಾಗಿ ಇಳಿದಿದೆ. 131 ಸಾವುಗಳ ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಸತತ ಆರು ದಿನಗಳಲ್ಲಿ ಶೇ.1.73 ರಷ್ಟು ಪ್ರಕರಣಗಳು ಅಂದರೆ 1,84,182 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಮಾಹಿತಿ ಪ್ರಕಾರ ಹೆಚ್ಚಿನ 13,203 ಸೋಂಕು ಕೇಸ್‍ಗಳು ದಾಖಲಾಗುವ ಮೂಲಕ ದೇಶದಲ್ಲಿ 1,06,67,736ಕ್ಕೆ ಏರಿದೆ. ಆದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತಲೂ ಕಡಿಮೆ ಇರುವುದು ಉತ್ತಮ ಬೆಳವಣಿಗೆ ಎಂದು ಸಚಿವಾಲಯ ವರದಿ ಹೇಳಿದೆ.

ಶೇ.96.83 ರಷ್ಟು ಸೋಂಕಿತ ಪ್ರಕರಣಗಳು ಅಂದರೆ, 1 ಕೋಟಿ 03 ಲಕ್ಷ 30 ಸಾವಿರದ 084 ಮಂದಿ ಕೊರೊನಾ ಕಾಯಿಲೆಯಿಂದ ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ.
ಮೃತಪಟ್ಟವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು, ದಾಖಲಾದ ಸಂಖ್ಯೆ ಕೇವಲ 131, ಇದು ಪ್ರತಿಶತ 1.4 ರಷ್ಟಾಗಿವೆ.

ಅವುಗಳಲ್ಲಿ ಪ್ರಮುಖವಾಗಿ ಮಹಾರಾಷ್ಟ್ರ 45, ಕೇರಳ 20, ದೆಹಲಿ 9 ಹಾಗೂ ಉಳಿದ ಸಾವು ಪ್ರಕರಣಗಳು ಛತ್ತೀಸ್‍ಗಢ, ಪಶ್ಚಿಮ ಬಂಗಾಲ ಮತ್ತು ಉತ್ತರ ಪ್ರದೇಶದಲ್ಲಿ ಸಂಭವಿಸಿವೆ.