ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,923 ಮಂದಿಗೆ ಕೊರೋನಾ ಪಾಸಿಟಿವ್

ನವದೆಹಲಿ, ಫೆ.11 (ಪಿಟಿಐ)- ಜಾಗತಿಕವಾಗಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾದ ಕೊರೊನಾ ದಿನೇ ದಿನೇ ಕಡಿಮೆಯಾಗುತ್ತಿದ್ದ ಎಂಬ ಸಂತೋಷದ ಸುದ್ದಿ ನಡುವೆ ದೇಶದಲ್ಲಿ ಒಂದೇ ದಿನ 12,923 ಹೊಸದಾಗಿ ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಹೊಸ ಕೇಸ್‍ಗಳು ಸೇರಿದಂತೆ ಭಾರತದಲ್ಲಿ ಇದುವರೆಗಿನ ವರದಿಯಾಗಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ 1,08,71,294ಕ್ಕೇರಿದೆ. ಅದರಲ್ಲಿ ಅದರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಗುಣಮುಖರಾಗಿರುವವರ ಸಂಖ್ಯೆ 1,05,73,372 ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ಮಾಹಿತಿ ಬಿಡುಗಡೆ ಮಾಡಿದೆ.

ನಿನ್ನೆ ಒಂದೇ ದಿನ 108 ಮಂದಿ ಸೋಂಕಿನ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಆದರೆ, ಒಟ್ಟಾರೆ ಮೃತಪಟ್ಟವರ ಸಂಖ್ಯೆ 1,55,360 ಅಂದರೆ ಶೇ.1.73 ಆಗಿದ್ದು, ಇದು ವಿಶ್ವ ಮಟ್ಟದಲ್ಲಿ ಮೆಚ್ಚಿಗೆ ಪಡದ ಸಂಖ್ಯೆಯಾಗಿದೆ. ಕೋವಿಡ್-19ನಿಂದ ಪ್ರತಿಶತ 97.26 ರಷ್ಟು ಚೇತರಿಕೆ ತೃಪ್ತಿದಾಯಕ ಎನಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವರದಿ ಪ್ರಕಾರ ಇದುವರೆಗೆ 20,40,23,840 ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದೆ. ಬುಧವಾರದಂದು 6,99,185 ಆರ್‍ಟಿ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.