ಭಾರತದಲ್ಲಿ ಮತ್ತೆ ದಿನಕ್ಕೆ 40 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ..!

Spread the love

ನವದೆಹಲಿ,ಮಾ.20-ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರುಗತಿಯಲ್ಲೆ ಸಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 40953 ಮಂದಿಗೆ ಸೋಂಕು ತಗುಲಿರುವ ಮೂಲಕ ಸೋಂಕಿತರ ಸಂಖ್ಯೆ 1,15,55284ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ಕೊರೊನಾ ಲಸಿಕೆ ಆಂದೋಲನ ಯಶಸ್ವಿಯಾಗಿ ಮುಂದುವರೆದಿರುವ ಸಂದರ್ಭದಲ್ಲೇ ಸಾವಿರಾರು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದದ ಸಕ್ರಿಯ ಸೋಂಕು ಪ್ರಮಾಣ 2,88,394ಕ್ಕೆ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.96.12ಕ್ಕೆ ಕುಸಿದಿದೆ.

ಕಳೆದ 111 ದಿನಗಳಲ್ಲೇ ನಿನ್ನೆ ಅತ್ಯಧಿಕ ಸೋಂಕಿತರ ಪ್ರಮಾಣ ದಾಖಲಾಗಿರುವುದು ಉಲ್ಲೇಖಾರ್ಹ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 188 ಮಂದಿ ಬಲಿಯಾಗಿದ್ದು, ಕೊರೊನಾದಿಂದ ಜೀವ ಕಳೆದುಕೊಂಡವರ ಸಂಖ್ಯೆ 1,59,558ಕ್ಕೆ ಏರಿಕೆಯಾಗಿದೆ.

Facebook Comments