ವರ್ಷಾಚರಣೆ ನಂತರ ಎದುರಾಯ್ತು ಕೊರೊನಾ ಭೀತಿ

Social Share

ಬೆಂಗಳೂರು, ಜ.2- ಕೊರೊನಾ ಆತಂಕದ ನಡುವೆಯು ಹೊಸ ವರ್ಷಕ್ಕೆ ಅವಕಾಶ ಕೊಟ್ಟಿದ್ದೇ ತಪ್ಪಾಯಿತ್ತಾ. ವರ್ಷಾಚರಣೆ ಬಳಿಕ ಪಾಲಿಕೆಗೆ ತಲೆ ನೋವಾಗಿದೆ. ಈ ಬಾರಿ ವರ್ಷಾಚರಣೆಗೆ ಯಾವುದೇ ನಿಬರ್ಂಧ ಏರದೆ ಅನುಮತಿ ನೀಡಿದ್ದು , ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದೆಲ್ಲೆಡೆ ವಿಜೃಂಭಣೆ ಯಿಂದ ಆಚರಿಸಲಾಯಿತು.

ವಿದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಸಹ ಕೆಲ ನಿಯಮಗಳನ್ನು ಜಾರಿಗೆ ತಂದಿದ್ದು , ಜನರು ಮಾತ್ರ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಇದರಿಂದಾಗಿ ಕೋವಿಡ್ ರೂಪಾಂತರಿ ಹರಡುವ ಭಯ ಪಾಲಿಕೆಗೆ ಎದುರಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಮುನ್ಸೂಚನೆ ನೀಡಿದ್ದು , ನಿಯಮ ಪಾಲಿಸುವಂತೆ ನಿರ್ದೇಶನ ನೀಡಿದೆ. ಸಿಲಿಕಾನ್ ಸಿಟಿಗೆ ಜನವರಿ 3ನೆ ವಾರದಲ್ಲಿ ಬಿಎಫ್-7 ಹರಡುವ ಲಕ್ಷಣಗಳು ಇವೆ ಎಂದು ತಜ್ಞರು ತಿಳಿಸಿದ್ದು , ಆದರೂ ಸಹ ಸಂಭ್ರಮದಿಂದ ವರ್ಷಾಚರಣೆ ಆಚರಿಸಿದ್ದಾರೆ.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಇಷ್ಟು ದಿನ ಕೇವಲ 1 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಈಗ ಪ್ರತಿದಿನ 3 ಸಾವಿರ ಪರೀಕ್ಷೆ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಆತಂಕ ಎದುರಾಗಿದೆ. ಹಾಗಾದರೆ ಸಿಲಿಕಾನ್ ಸಿಟಿ ಜನರಿಗೆ ನ್ಯೂ ಇಯರ್, ಕೊರೋನಾ ರೂಪಾಂತರ ಆಘಾತ ನೀಡುತ್ತಾ ಎಂಬ ಭಯ ಎದುರಾಗಿದೆ.

coronavirus, Bengaluru, new year, celebrations,

Articles You Might Like

Share This Article