ಭಾರತದಲ್ಲಿ ಕೊರೋನಾ ಯುಗಾಂತ್ಯ, ಶೇ.1ಕ್ಕೆ ಕುಸಿದ ಪಾಸಿಟಿವಿಟಿ ದರ

Social Share

ಬೆಂಗಳೂರು, ಫೆ.27- ಕೊರೊನಾ ಯುಗಾಂತ್ಯವಾದಂತೆ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕೊರೊನಾ ಸೋಂಕಿನ ಪ್ರಕರಣಗಳು ದೇಶಾದ್ಯಂತ ಕ್ಷೀಣಿಸುತ್ತಿವೆ.
ಪಾಸಿಟಿವಿಟಿ ದರ ಕಳೆದ 24 ಗಂಟೆಗಳಲ್ಲಿ ಶೇ.1ಕ್ಕೆ ಕುಸಿದಿದೆ. ನಿನ್ನೆ ಸೋಂಕಿತರು ದೇಶದಲ್ಲಿ ಕೇವಲ 10,000 ಮಾತ್ರ ಪತ್ತೆಯಾಗಿದ್ದಾರೆ. 20,439 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ 4,22,90,921 ಮಂದಿ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದಾರೆ.
ಚೇತರಿಕೆಯ ಪ್ರಮಾಣ ಶೇ.98.54ರಷ್ಟಿದೆ. ಸೋಂಕಿಗೆ 243 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದೆ.
ಮಾಸ್ಕ್ ಮತ್ತು ಸಾಮಾಜಿಕ ಅಂತರ ಹೊರತುಪಡಿಸಿ ಸಾಂಸ್ಕøತಿಕ, ಧಾರ್ಮಿಕ ಚಟುವಟಿಕೆಗಳು, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈವರೆಗೆ ದೇಶದಲ್ಲಿ ಸುಮಾರು 1,77,67,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಜನರಲ್ಲಿ ಕೊರೊನಾ ಆತಂಕ ಕೂಡ ಕ್ರಮೇಣ ದೂರವಾಗುತ್ತಿದೆ.

Articles You Might Like

Share This Article