ನವದೆಹಲಿ,ಜ.2- ಹೊಸ ವರ್ಷದ ಹರ್ಷಾಚರಣೆಯ ಜನಸಂದಣಿ ಹೊರತಾಗಿಯೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದ್ದು ಸಮಾದಾನದ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ, ಅಮೆರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ದಾಖಲಾಗುವುದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಆ ದೇಶಗಳ ಮೇಲೆ ನಿಗಾ ಇಟ್ಟಿರುವ ಭಾರತ ಮುನ್ನೆಚ್ಚರಿಕೆಯ ಕ್ರಮಗಳಾಗಿ ಇಲ್ಲಿಯೂ ಹಲವು ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಕೋವಿಡ್ ನಿಯಂತ್ರಣ ಶಿಷ್ಟಚಾರಗಳನ್ನು ಪಾಲನೆ ಮಾಡಬೇಕು ಮತ್ತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಪದೇ ಪದೇ ಸೂಚನೆ ನೀಡಿತ್ತು.
ಹೊಸ ವರ್ಷಾಚರಣೆಯ ವೇಳೆ ಜನ ಸ್ವಯಂ ನಿರ್ಬಂಧಗಳನ್ನು ಉಲ್ಲಂಘಿಸುವುದರಿಂದ ಕೋವಿಡ್ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ವರ್ಷಾರಂಭದ 40 ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
ನ್ಯೂಯಾರ್ಕ್ ಗವರ್ನರ್ ಆಗಿ ಕ್ಯಾಥಿ ಹೊಚುಲ್ ಅಧಿಕಾರ ಸ್ವೀಕಾರ
ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳ ಪ್ರಕಾರ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣವಾಗಿದೆ. ನಿನ್ನೆಯ ದೈನಂದಿನ ಸೋಂಕಿನ ಪ್ರಕರಣಗಳ ಪ್ರಮಾಣ 173ರಷ್ಟಾಗಿದ್ದು, 2,670 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ
ಈವರೆಗಿನ ಒಟ್ಟು ಸೋಂಕಿನ ಪ್ರಕರಣಗಳು 4,46,78,822ರಷ್ಟಾಗಿದೆ. 5,30,707 ಮಂದಿ ಮೃತಪಟ್ಟಿದ್ದಾರೆ. ನಿನ್ನೆಯ ದಿನ ಕೇರಳ ಹಾಗೂ ಉತ್ತರಾಖಾಂಡ್ನಲ್ಲಿ ತಲಾ ಒಬ್ಬರಂತೆ ಎರಡು ಸಾವುಗಳಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.01ರಷ್ಟಾಗಿದೆ. ಗುಣಮುಖರಾದವರ ಪ್ರಮಾಣ ಶೇ.98.80ರಷ್ಟಾಗಿದೆ. ನಿನ್ನೆಯ ಮತ್ತು ಇಂದಿನ ದೈನಂದಿನ ಸೋಂಕಿನ ಪ್ರಕರಣಗಳಲ್ಲೇ 36ರಷ್ಟು ಇಳಿಮುಖವಾಗಿದೆ. ಒಟ್ಟು ಸಾವಿನ ಪ್ರಮಾಣ ಶೇ.1.19ರ ಮಿತಿಯಲ್ಲೇ ನಿಯಂತ್ರಣವಾಗಿದೆ.
#Coronavirus, #CovidGuidelines, #NewYear, #Celebrations,