ಬೆಂಗಳೂರಿಗರಿಗೆ ಕಾದಿದೆಯಾ ಬಿಗಿ ಕ್ರಮದ ಭಯ..? ನಾಳೆ ಮಹತ್ವದ ಕಾವಿಡ್ ಸಭೆ

Social Share

ಬೆಂಗಳೂರು,ಡಿ.25- ರಾಜ್ಯದಲ್ಲಿ ನಾಲ್ಕನೇ ಕೋವಿಡ್ ಅಲೆ ಕಾಣಿಸಿಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಾಳೆ ಇಬ್ಬರು ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಉಪಾಧ್ಯಕ್ಷರೂ ಆಗಿರುವ ಸಚಿವ ಆರ್.ಅಶೋಕ್, ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಎರಡು ಇಲಾಖೆಗಳ ಅಧಿಕಾರಿಗಳ ಜೊತೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವುದು, ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಇತರೆ ಭಾಗಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಸಂತ ವಾಜಪೇಯಿ ಸ್ಮರಿಸಿದ ಗಣ್ಯರು

ಈಗಾಗಲೇ ಬಿಎಂಟಿಸಿ, ಮೆಟ್ರೋ ಹಾಗೂ ಖಾಸಗಿ ಶಾಲೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್‍ಗಳನ್ನು ಕಡ್ಡಾಯಗೊಳಿಸಿರು ವುದರಿಂದ ಸಭೆಯಲ್ಲಿ ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸದ್ಯಕ್ಕೆ ರಾಜ್ಯ ಸರ್ಕಾರ ಲಾಕ್‍ಡೌನ್‍ನಂತಹ ಯಾವುದೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಪಪಡಿಸಿದೆ. ಆದರೆ ಹೊಸ ವರ್ಷಾಚರಣೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಸೇರುತ್ತಿರುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ಕೆಲವು ನಿರ್ಬಂಧಗಳನ್ನು ಹೇರುವ ಸಂಭವವಿದೆ.

ಜನವರಿ ತಿಂಗಳ ಅಂತ್ಯದಿಂದ ಫೆಬ್ರವರಿ ತಿಂಗಳ ನಂತರ ಹೊಸ ಮಾದರಿಯ ಸೋಂಕು ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಕಾರಣ ಸರ್ಕಾರ ಈಗಿನಿಂದಲೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿದೆ.

ಹೊಸವರ್ಷಾಚರಣೆಗೆ ಪ್ರವಾಸಿ ತಾಣಗಳಾದ ನಂದಿಬೆಟ್ಟ, ಹಂಪಿ, ಹೊಸಕಪೇಟೆ, ಗೋಕರ್ಣ, ಮುರಡೇಶ್ವರ ಸೇರಿದಂತೆ ಮತ್ತಿತರ ಕಡೆ ಭಾರೀ ಪ್ರಮಾಣದಲ್ಲಿ ಜನರು ಆಗಮಿಸುವ ಸಂಭವವಿರುವುದರಿಂದ ಹೆಚ್ಚಿನ ಜನಜಂಗುಳಿ ಸೇರಿದಂತೆ ನಿರ್ಬಂಧ ಹಾಕಲಿದೆ.

ಕಳೆದ 8 ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಹರಿದುಬಂದ ಕಾಣಿಕೆ ಎಷ್ಟು ಗೊತ್ತೇ..?

ಪ್ರತ್ಯೇಕ ಮಾರ್ಗಸೂಚಿ:
ರಾಜಧಾನಿ ಬೆಂಗಳೂರು ಹಾಗೂ ಇತರೆ ಭಾಗಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಬೆಂಗಳೂರಿನ ಕೆ.ಆರ್.ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟ್‍ಲೈಟ್, ರೈಲ್ವೆ ನಿಲ್ದಾಣಗಳು, ಮಾಲ್‍ಗಳು, ಸಿನಿಮಾ ಥಿಯೇಟರ್ ಸೇರಿದಂತೆ ಮತ್ತಿತರ ಕಡೆ ಜನಸಂದಣಿಗೆ ನಿರ್ಬಂಧ ಹಾಕುವ ಸಂಭವವಿದೆ.

ಅದೇ ರೀತಿ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಮೈಸೂರಿನ ಚಾಮುಂಡಿ ಬೆಟ್ಟ, ಧರ್ಮಸ್ಥಳ, ಕೊಲ್ಲೂರು, ಮುರುಡೇಶ್ವರ, ಮಂಗಳೂರಿನ ಕದ್ರಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಸೇರಿದಂತೆ ಕೆಲವು ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಕೇಂದ್ರಗಳಲ್ಲೂ ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ.

ಜೈಪುರ ಅರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳ

ಬೆಂಗಳೂರಿನಲ್ಲಿ ಔಷಧಿ ಮತ್ತು ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಪಬ್, ಬಾರ್, ಡಿಸ್ಕೋತೆಕ್ ಮತ್ತಿತರ ಕಡೆ ಸಮಯದ ಅವಧಿಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಯಾವುದೇ ಕಠಿಣ ನಿಯಮಗಳನ್ನು ಜಾರಿ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಕೆಲವು ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದೆ.

coronavirus, fourth wave, meeting, guideline,

Articles You Might Like

Share This Article