ಭಾರತದಲ್ಲಿ ಮತ್ತೆ ಕೊರೋನಾ ಅಬ್ಬರ, ಒಂದೇ ದಿನ 126 ಬಲಿ, 22,854 ಮಂದಿಗೆ ಪಾಸಿಟಿವ್..!

ನವದೆಹಲಿ,ಮಾ.11-ಕಳೆದ ಎರಡೂವರೆ ತಿಂಗಳಿನಿಂದ ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 22,854 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ 24 ಗಂಟೆಗಳಲ್ಲಿ 22,854 ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1,12,85,561ಕೋಟಿಗೆ ಏರಿಕೆಯಾಗಿದೆ.

ಇಂದು ಮುಂಜಾನೆವರೆಗೆ ನಿನ್ನೆಯಿಂದ ಸಾವನ್ನಪ್ಪಿದ್ದವರ ಸಂಖ್ಯೆ 126ಕ್ಕೆ ಹೆಚ್ಚಳಗೊಂಡಿದ್ದು, ಒಟ್ಟು ಸತ್ತವರ ಸಂಖ್ಯೆ 1,58,189ಲಕ್ಷದ ಗಡಿ ದಾಟಿದೆ. ಇದರೊಂದಿಗೆ ದೇಶದಲ್ಲಿ 1,89,226 ರಷ್ಟು ಸಕ್ರಿಯ ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಕಳೆದ ಆಗಸ್ಟ್‍ನಲ್ಲಿ 20ಲಕ್ಷದಷ್ಟಿದ್ದ ಸೋಂಕಿತರ ಸಂಖ್ಯೆ ಕಾಲ ಕ್ರಮೇಣ ಹೆಚ್ಚಳಗೊಳ್ಳುತ್ತ ಬರುತ್ತಿದ್ದು, ಡಿಸೆಂಬರ್ 2020ರ ವೇಳೆಗೆ ಸೋಂಕಿತರ ಸಂಖ್ಯೆ ಒಂದು ಕೋಟಿ ಗಡಿ ದಾಟಿತ್ತು.

ನಂತರ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯತ್ತ ಸಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.