ಭಾರತದಲ್ಲಿ ಒಂದೇ ದಿನ 1.64 ಲಕ್ಷ ಮಂದಿಗೆ ಕರೋನ ಸೋಂಕು ದೃಢ, 3,460 ಮಂದಿ ಸಾವು!

Spread the love

ನವದೆಹಲಿ ಮೇ .30-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದ್ದು ಕಳೆದ 24ಗಂಟೆಗಳಲ್ಲಿ 1.64 ಲಕ್ಷ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇದೇ ವೇಳೆ 3.460ಜನರು ಅಸುನೀಗಿದ್ದಾರೆ .ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಶೇಕಡಾ 8ಕ್ಕೆ ತಲುಪಿದೆ.

ಕಳೆದ 24 ಗಂಟೆಯಲ್ಲಿ 254326 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಹೊಸ ಆಶಾಭಾವನೆ ಮೂಡಿದೆ ಇದರ ನಡುವೆ ದೇಶಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಕೂಡ ಹೆಚ್ಚಿಸಲಾಗಿದ್ದು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ ದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಗೆ ತಂದಿರುವುದರಿಂದ ಕೋರೋಣ ಸೋಂಕಿತರ ಒಟ್ಟಾರೆ ಸಂಖ್ಯೆ ಕಡಿಮೆಯಾಗಿದೆ ಎಂದು ತಜ್ಞ ವೈದ್ಯರ ಸಮಿತಿ ತಿಳಿಸಿದ್ದಾರೆ.

ಈಗಾಗಲೇ ಲಸಿಕೆ ಅಭಿಯಾನವು ಕೂಡಾ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದ್ದ ಒಂದೇ ದಿನದಲ್ಲಿ ಸುಮಾರು 27 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ದೇಶದ ವಿವಿಧೆಡೆ ಸಂಘಸಂಸ್ಥೆಗಳು ಕೊರಳ ಅನಿಸಿಕೆಯನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದೆ ಆದರೆ ಸರಿಯಾದ ರೀತಿಯಲ್ಲಿ ಲಸಿಕೆಯನ್ನು ಶೇಖರಣೆ ಮಾಡದೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಸಿಕೆಯನ್ನು ಇಂತಿಷ್ಟೇ ಉಷ್ಣಾಂಶ ಶೇಖರಣೆ ಮಾಡಬೇಕೆಂಬ ನಿಯಮವಿದೆ ಆದರೆ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ ಸ್ಟಾರ್ ಹೋಟೆಲ್ ಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತಕ್ಷಣ ನಿಲ್ಲಿಸುವಂತೆ ತಿಳಿಸಲಾಗಿದೆ ಒಟ್ಟಾರೆ ಆಗಸ್ಟ್-ಸೆಪ್ಟೆಂಬರ್ ಒಳಗೆ ದೇಶದ ಅರ್ಧ ಜನಕ್ಕೆ ಲಸಿಕೆಯನ್ನು ನೀಡುವ ಗುರಿಯನ್ನು ಕೇಳಿ ಸರ್ಕಾರ ಹೊಂದಿದೆ ಇದೊಂದು ದೊಡ್ಡ ಸವಾಲಾಗಿತ್ತು ಔಷಧ ಕಂಪನಿಗಳು ಹೇಗೆ ಸರಬರಾಜು ಮಾಡುತ್ತದೆ ಎಂಬುದು ದೊಡ್ಡ ಕುತೂಹಲವಾಗಿದೆ.

Facebook Comments