ನವದೆಹಲಿ, ಜ.26- ಭಾರತದಲ್ಲಿ ಹೊಸದಾಗಿ 24 ಗಂಟೆಯಲ್ಲಿ 2,85,914 ಕೇಸ್ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಪ್ರಕರಣಗಳ ಸಂಖ್ಯೆ 4,00,85,116ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಾಜಾ ಮಾಹಿತಿ ನೀಡಿದೆ.
ನಿನ್ನೆ 665 ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣ ಸಂಖ್ಯೆ 4,91,127ಕ್ಕೆ ಏರಿದೆ ಎಂದು ಸಚಿವಾಲಯ ಹೇಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,23,018ಕ್ಕೆ ಇಳಿದಿದ್ದು, ಸಮಗ್ರ ಸೋಂಕು ಪ್ರಕರಣಗಳ ಶೇ.5.55ರಷ್ಟಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ಪ್ರಮಾಣವು 93.23 ಪ್ರತಿಶತಕ್ಕೆ ತಗ್ಗಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳ ಅವಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 13,824ರಷ್ಟು ಕಡಿಮೆಯಾಗಿದೆ ಎಂದು ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
