ಭಾರತದಲ್ಲಿ ‘ಸೈಲೆಂಟ್’ ಆದ ಕೊರೋನಾ

Social Share

ನವದೆಹಲಿ,ಜ.17- ಚೀನಾ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿಗಳು ಭಾರೀ ಅನಾಹುಸತ ಸೃಷ್ಟಿಸಿದ್ದರೆ, ಭಾರತದಲ್ಲಿ ಕೋವಿಡ್ ಇತಿಹಾಸದಲ್ಲೇ ಅತಿ ಕಡಿಮೆ ಪ್ರಕರಣಗಳು ದಾಖಲಾಗಿ, ನಿಟ್ಟುಸಿರು ಬಿಡುವಂತೆ ಮಾಡಿವೆ.

ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರ ನಿನ್ನೆ 89 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,035ರಷ್ಟು ಕುಸಿದಿದೆ. ದೇಶದಲ್ಲಿ ಆರಂಭದಿಂದಲೂ ಈವರೆಗೆ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 4,46,81,233ರಷ್ಟಾಗಿದೆ. ಸಾವಿನ ಸಂಖ್ಯೆ 5,30,726ರಷ್ಟಕ್ಕೆ ತಟಸ್ಥವಾಗಿದೆ.

ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ದೈನಂದಿನ ಸೋಂಕಿನ ಪ್ರಮಾಣ 0.05ರಷ್ಟಿರುವುದು ಸಮಾಧಾನಕವಾಗಿದೆ. ವಾರದ ಸೋಂಕಿನ ಪ್ರಮಾಣವನ್ನೂ ಶೇ.0.09ರಷ್ಟಿದೆ. ಒಟ್ಟು ಸೋಂಕುಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.01ರಷ್ಟು ಎಂದು ಇಲಾಖೆ ತಿಳಿಸಿದೆ. ಇದಕ್ಕೆ ಎದುರಾಗಿ ಗುಣಮುಖರಾಗುವವರ ಪ್ರಮಾಣ ಶೇ.98.80ರಷ್ಟಿದ್ದು ಕೋವಿಡ್ ಪ್ರಕರಣಗಳ ಬಗ್ಗೆ ನಿರಾತಂಕ ಮನೆ ಮಾಡಿದೆ.

ಕಳೆದ 24 ಗಂಟೆಯಲ್ಲಿ 84 ಪ್ರಕರಣಗಳು ಕಡಿಮೆಯಾಗಿವೆ. ಈವರೆಗೂ 4,41,48,472 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿನಲ್ಲಿ ಸಾವಿನ ಪ್ರಮಾಣ ಶೇ.1.19ರಷ್ಟಿದೆ. ಕೋವಿಡ್ ಸೋಂಕಿಗೆ ಎದುರಾಗಿ ದೇಶದಲ್ಲಿ 220.17 ಕೋಟಿ ಲಸಿಕಾ ಡೋಸ್‍ಗಳನ್ನು ನೀಡಲಾಗಿದೆ.

Coronavirus, India, records, lowest, daily cases,

Articles You Might Like

Share This Article