ಭಾರತದಲ್ಲಿ ಕೊರೋನಾ ಆರ್ಭಟ : 24 ಗಂಟೆಯಲ್ಲಿ 2.68 ಲಕ್ಷ ಹೊಸ ಕೇಸ್, 402 ಸಾವು..!

Social Share

ನವದೆಹಲಿ, ಜ.15- ಭಾರತದಲ್ಲಿ ದೈನಂದಿನ ಸೋಂಕಿನ ಪ್ರಮಾಣ 2,68,833ರಷ್ಟಾಗಿದ್ದು, 402 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ಈ ಮೂಲಕದ ದೇಶದಲ್ಲಿ 3,65,86,760 ಮಂದಿಗೆ ಸೋಂಕು ತಗುಲಿದೆ. ದಿನದ ಸೋಂಕಿನ ಪ್ರಮಾಣ ಶೇ.16.66ರಷ್ಟಾಗಿದ್ದು, ವಾರದ ಸೋಂಕಿನ ಪ್ರಮಾಣ ಶೇ.12.84ರಷ್ಟಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಕಿತ್ಸೆ ಪಡೆದು ನಿನ್ನೆ 1,22,684 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ 3,49,47,390 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆಯ ಪ್ರಮಾಣ ಶೇ.94.83ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,17,820ರಷ್ಟಿದ್ದು, ಶೇ.3.85ರ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ.
ಅತ್ಯಂತ ವೇಗವಾಗಿ ಹರಡುವ ಓಮಿಕ್ರಾನ್ ರೂಪಾಂತರಿ 6,041 ಮಂದಿಗೆ ತಗುಲಿದೆ. ಇದರ ಪ್ರಮಾಣ ಶೇ.5.01ರಷ್ಟು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ ಒಂದೇ ದಿನ 16,13,740 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದಿನದ ಮಟ್ಟಿಗೆ 58,02,976 ಡೋಸ್ ಲಸಿಕೆ ಹಾಕಲಾಗಿದ್ದು, 156.02 ಒಟ್ಟು ಡೋಸ್‍ಗಳನ್ನು ನೀಡಲಾಗಿದೆ.

Articles You Might Like

Share This Article