ಕಳೆದ ವರ್ಷ ಜುಲೈನಲ್ಲೇ ರಾಜ್ಯದಲ್ಲಿ BF.7 ವೈರಸ್ ಪತ್ತೆಯಾಗಿತ್ತು..!

Social Share

ಬೆಂಗಳೂರು,ಜ.2- ನಾಲ್ಕನೆ ಅಲೆಗೆ ಕಾರಣವಾಗಲಿರುವ ಓಮಿಕ್ರಾನ್ ಬಿಎಫ್.7 ವೈರಸ್ ರಾಜ್ಯದಲ್ಲೂ ಪತ್ತೆಯಾಗಿರುವುದು ಧೃಡಪಟ್ಟಿದೆ. ಅದರಲ್ಲೂ ಬಿಎಫ್.7 ರಾಜ್ಯಕ್ಕೆ ಎಂಟ್ರಿ ಕೊಟ್ಟು ತಿಂಗಳುಗಳೇ ಕಳೆದಿವೆ ಎಂಬ ಮಾಹಿತಿ ಹೊರಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಜುಲೈನಲ್ಲೇ ಬಿಎಫ್.7 ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿತ್ತು ಎಂಬ ಬೆಚ್ಚಿ ಬೀಳಿಸುವ ಹೇಳಿಕೆ ನೀಡುವ ಮೂಲಕ ಆರೋಗ್ಯ ಇಲಾಖೆ ಜನರನ್ನು ಮತ್ತಷ್ಟು ಆತಂಕ ಸೃಷ್ಟಿಸಿದೆ. ಬೆಂಗಳೂರು ಮೂಲದ ವ್ಯಕ್ತಿ ಜುಲೈನಲ್ಲಿ ಕೇರಳಕ್ಕೆ ಹೋಗಿ. ಬಂದಿದ್ದ. ನಂತರ ಆತ ಜ್ವರ. ಕೆಮ್ಮು ಅಂತ ಅಸ್ಪತ್ರೆ ಸೇರಿದಾಗ ಅ ವ್ಯಕ್ತಿಗೆ ಕೊವೀಡ್ ಲಕ್ಷಣ ಕಾಣಿಸಿಕೊಂಡಿತ್ತು.

ಆ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿಯ ರಕ್ತ ಹಾಗೂ ಮೂಗಿನ ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ರವಾನಿಸಲಾಗಿತ್ತು. ನಂತರ ಸೋಂಕಿತ ವ್ಯಕ್ತಿ ಚಿಕಿತ್ಸೆ ನಂತರ ಮತ್ತೆ ರಾಜಸ್ಥಾನಗೆ ಹೋಗಿದ್ದ. ಒಂದು ತಿಂಗಳ ನಂತರ ಬಂದ ಆತನ ಜಿನೋಮಿಕ್ ಸೀಕ್ವೆನ್ಸ ರಿಪೋರ್ಟ್‍ನಲ್ಲಿ ಆತನಿಗೆ ಬಿಎಫ್.7 ಸೋಕು ತಗುಲಿರುವುದು ಧೃಡಪಟ್ಟಿತ್ತು.

ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಾಗ್ರಿ ಎಕ್ಸ್ ಪ್ರೆಸ್ ರೈಲು

ಪತ್ತೆಯಾದ ತಕ್ಷಣ ಆತನ ಜೊತೆ ಸಂಪರ್ಕ ಹೊಂದಿದ್ದವರನ್ನು ಪರೀಕ್ಷೆಗೊಳಪಡಿಸಿದಾಗ ಸದ್ಯ ಯಾರಿಗೂ ವೈರಸ್ ಹರಡಿಲ್ಲ ಎನ್ನುವುದು ತೃಪ್ತಿಕರವಾಗಿತ್ತು. ಬಿಎಫ್.7 ವೈರಸ್ ಆಪಾಯಕಾರಿ ಅಲ್ಲ ಅಂತ ತಜ್ಞರ ಹೇಳಿಕೆಯಿಂದಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ದಾಳಿ, 14 ಮಂದಿ ಸಾವು, 24 ಕೈದಿಗಳು ಪರಾರಿ

ಈ ಮೊದಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಚ್ಚರಿಕೆ ನೀಡಿ ಬಿಎಫ್.7 ವೈರಸ್ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿ್ತು. ಆದರೆ ಇದುವರೆಗೂ ಅಂತಹ ವೈರಸ್ ರಾಜ್ಯದಲ್ಲಿ ಕಂಡು ಬಂದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಆರೋಗ್ಯ ಇಲಾಖೆ ಇದೀಗ ಬಿಎಫ್.7 ವೈರಸ್ ಕಳೆದ ವರ್ಷವೇ ಬಂದು ಹೋಗಿದೆ ಎಂಬ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಸಮರ್ಪಕ ಅಂಕಿ ಅಂಶ ನೀಡುತ್ತಿಲ್ಲ ಎಂಬ ಗುಮಾನಿ ಕಾಡತೊಡಗಿದೆ.

coronavirus, Omicron, BF-7, Bengaluru,

Articles You Might Like

Share This Article