ಓಮಿಕ್ರಾನ್‍ನಿಂದ 650 ಉಪತಳಿಗಳ ರೂಪಾಂತರ

Social Share

ನವದೆಹಲಿ,ಜ.12- ಕೊರೊನಾ ರೂಪಾಂತರಿ ಓಮಿಕ್ರಾನ್‍ನಿಂದ 650 ಉಪತಳಿಗಳು ಹೊರ ಹೊಮ್ಮಿದ್ದು, ಅವುಗಳಲ್ಲಿ 200 ತಳಿಗಳು ದಕ್ಷಿಣ ಆಫ್ರಿಕಾದಲ್ಲೇ ಪತ್ತೆಯಾಗಿವೆ.

ಕೋವಿಡ್ ಸೋಂಕು ಕಾಡುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಬಿಎ.1, ಬಿಎ.2 ಉಪಗಳಿಗಳು 2021ರ ನವೆಂಬರ್‍ನಿಂದ 2022ರ ಮಾರ್ಚ್ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದವು. ಬಿಎ.4 ಮತ್ತು ಬಿಎ.5 ಉಪತಳಿಗಳು 2022ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದು ವರ್ಷ ಪೂರ್ತಿ ಜನರನ್ನು ಕಾಡಿದ್ದವು. ಈ ವರ್ಷದ ಜನವರಿ 9ರವರೆಗೆ ಒಟ್ಟು 650 ಉಪತಳಿಗಳು ಬೆಳಕಿಗೆ ಬಂದಿವೆ.

ಕೊರೊನಾ ತವರೂರು ಚೀನಾವನ್ನು ಕಂಗೇಡಿಸಿದ್ದ ಎಕ್ಸ್‍ಬಿಬಿ ಉಪತಳಿ ಮಾತ್ರ ಕಳೆದ ಸೆಪ್ಟಂಬರ್‍ನಲ್ಲಿ ಅಮೆರಿಕಾ ಮತ್ತು ಸಿಂಗಾಪುರ್‍ನಲ್ಲಿ ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಬಿಎ2 ಉಪತಳಿಯೊಂದಿಗೆ ಮರುಸಂಯೋಜನೆಗೊಂಡು ಎರಡು ಅನುವಂಶಿಯ ವಸ್ತುಗಳನ್ನು ಪಡೆದಿದೆ.

ಹಿಂದಿನ ಉಪವರ್ಗಗಳಿಗೆ ಹೋಲಿಸಿದರೆ ಎಕ್ಸ್‍ಬಿಬಿ ಉಪವರ್ಗ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಗುಣಕಲಕ್ಷಣಗಳನ್ನು ಹೊಂದಿದೆ. ಎಕ್ಸ್‍ಬಿಬಿ ತನ್ನ ನಂತರ ಮತ್ತಷ್ಟು ಉಪವರ್ಗಗಳ ಉದ್ಭವಕ್ಕೆ ಕಾರಣವಾಗಿದೆ. ಎಕ್ಸ್‍ಬಿಬಿ.1, ಎಕ್ಸ್‍ಬಿಬಿ.2, ಎಕ್ಸ್‍ಬಿಬಿ.3 ಸರಣಿಗಳು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಿಸಿವೆ. ಅಮೆರಿಕಾ ಬಳಿಕ ನಿಧಾನಕ್ಕೆ ಇತರ ದೇಶಗಳಲ್ಲೂ ಕಾಣಿಸಿಕೊಳ್ಳಲಾರಂಬಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ 2022ರ ಡಿಸೆಂಬರ್ ಕೊನೆಯಲ್ಲಿ ಸಂಗ್ರಹಿಸಲಾದ ಮಾದರಿಯಲ್ಲಿ ವಿಭಿನ್ನವಾದ ಎಕ್ಸ್‍ಬಿಬಿ.1.5 ತಳಿಯೂ ಪತ್ತೆಯಾಗಿದೆ. ಈಗಾಗಲೇ ಸಾಕಷ್ಟು ವಂಶಾವಳಿಗಳನ್ನು ಸೃಷ್ಟಿಸಿದ ಎಕ್ಸ್‍ಬಿಬಿಯಿಂದ ಮತ್ತೊಂದು ಉಪತಳಿ ಸೃಷ್ಟಿಯಾಗುವುದು ಅನಿರೀಕ್ಷತವೇನು ಅಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ ಎಕ್ಸ್‍ಬಿಬಿ ಪ್ರಬಲವಾದ ಪರಿಚಲನೆ ಹೊಂದಿದೆ. ರೂಪಾಂತರಿ ವೈರಾಣುಗಳು ಎಫ್486ಪಿ ಸ್ಪೈಕ್ ಪ್ರೋಟಿನ್ ಹೊಂದಿರುವುದರಿಂದ ಮಾನವನ ಅಂಗಾಗಳಿಗೆ ಶೀಘ್ರ ವ್ಯಾಪಿಸಲಿದ್ದು, ತೀವ್ರವಾದ ಪ್ರಸರಣಾ ವೇಗವನ್ನು ಹೊಂದಿದೆ ಎಂದು ಹೇಳಲಾಗಿದೆ.

ಈ ಉಪವರ್ಗದ ತೀವ್ರತೆ ಇತರ ಓಮಿಕ್ರಾನ್‍ಗಿಂತಲೂ ಭಿನ್ನವಾಗಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ರೋಗಾಣು ಅಭಿವೃದ್ಧಿಯ ತಾಂತ್ರಿಕ ಸಲಹಾ ಗುಂಪು ಎಕ್ಸ್‍ಬಿಬಿ ಉಪತಳಿಯ ಹಾನಿಕಾರಕ ಅಂಶಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.

ರಾಜ್ಯಪಾಲರ ಅಂಗಳ ತಲುಪಿದ ಸ್ಯಾಂಟ್ರೋ ರವಿ ಪ್ರಕರಣ

ದಕ್ಷಿಣ ಆಫ್ರಿಕಾದಲ್ಲಿ ಎಕ್ಸ್‍ಬಿಬಿ.1.5ರ ಪರಿಚಯವು ಸೋಂಕುಗಳ ದೊಡ್ಡ ಅಲೆಗೆ ಕಾರಣವಾಗದೇ ಇರಬಹುದು. ಆದರೂ ಅದರ ಪರಿಣಾಮಗಳೆನು ಎಂದು ಗೋತ್ತಿಲ್ಲ. ಸೋಂಕಿನ ಮಾಹಿತಿಯನ್ನು ಪ್ರತಿವಾರ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತಿದೆ. ಎಲ್ಲಾ ಪಾಸಿಟಿವ್ ಪ್ರಕರಣಗಳನ್ನು ಜಿನೋಮೆಟಿಕ್ ಸೀಕ್ವೇನ್ಸಿಂಗ್ ಲ್ಯಾಬ್‍ನಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗವೆಂದರೆ ಕೋವಿಡ್ ಶಿಷ್ಟಾಚಾರಗಳ ಪಾಲನೆ ಮತ್ತು ಲಸಿಕೆ ಪಡೆಯುವುದು ಆದ್ಯತೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

coronavirus, omicron, variant, mutant,

Articles You Might Like

Share This Article