ಕರೋನಾಗೆ ಹೆದರಿ ಸೊಂಕಿತರು ಆತ್ಮಹತ್ಯೆ..!

Spread the love

ಬೆಂಗಳೂರು.ಮೇ11 ಕರೋನಾ ಸೊಂಕಿಗೆ ಹೆದರಿ ರಾಜ್ಯದ ವಿವಿದೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಭಾರಿ ಆತಂಕ ಸೃಷ್ಟಿಸಿದೆ.
ಆಸ್ಪತ್ರೆ ಗಳಲ್ಲಿ ಬೆಡ್.ಆ್ಯಕ್ಸಿಜನ್.ಕೊರತೆಯಿಂದ ಮನನೊಂದು ಸೊಂಕಿತರು ಆತ್ಮಹತ್ಯೆ ದಾರಿ ಇಡಿಯುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ. ಚಿಕ್ಕಮಗಳೂರು.ಚಾಮರಾಜನಗರ. ಹುಬ್ಬಳ್ಳಿಯಲ್ಲಿ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ತಿಳಿದು ಬಂದಿದೆ.

ಸೊಂಕಿಗೆ ಹೆದರಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಲೇನಹಳ್ಳಿಯ ತಾಂಡ್ಯದಲ್ಲಿ ಡೆತ್ ನೊಟ್ ಬರೆದಿಟ್ಟು ನಿವೃತ್ತ ಉಪ ತಹಶಿಲ್ದಾರ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ಯ ಅದರಗುಂಚಿ ಗ್ರಾಮದ 70 ವರ್ಷ ದ ವೃದ್ದೆಗೆ ಪಾಸಿಟಿವ್ ಬಂದಿದ್ದು ನನ್ನಿಂದ ಸೊಂಕು ಬೆರೆಯವರಿಗೆ ಹರಡುವುದು ಬೆಡ ನನಗೆ ವಯಸ್ಸಾಗಿದೆ ನಾನು ಇದ್ದು ಏನ್ ಮಾಡಬೆಕುಎಂದು ಗ್ರಾಮದ ಹೊರವಲಯದ ಕಲ್ಲು ಕ್ವಾರಿಯ ನಿರಿನ ಗುಂಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಚಾಮರಾಜ ನಗರದ ಘಟನೆಯಿಂದ ಮನನೊಂದ ಕೊಳ್ಳೆಗಾಲ ತಾಲೂಕಿನಲ್ಲಿ ವೃದ್ದೆಯೊಬ್ಬರು ನೆಣು ಬಿಗಿದುಬಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಎರಡನೆ ಅಲೆ ಅತ್ಯಂತ ಭಿಕರವಾಗಿದ್ದು ಚಿಕ್ಕವರು.ದೊಡ್ಡವರು.ಬಡವ ಶ್ರಿಮಂತ ಎನ್ನದೆ ಎಲ್ಲರನ್ನೂ ಬಲಿ ಪಡೆದು ಕೊಳ್ಳುತ್ತಿದೆ.ರಾಜ್ಯದ ಪ್ರತಿಿನಿತ್ಯ ಸೊಂಕಿನ ಸಂಖ್ಯೆ ಹಾಗೂ ಮೃತರ ಸಂಖ್ಯೆ ಯಿಂದ ಆತಂಕಕ್ಕೋಳಗಾದ ಸೊಂಕಿತರು ಹೆದರಿ ಬೆಡ್.ಆಮ್ಲಜನಕ ಸಿಗದೆ ನರಳಿ ಸಾಯುವುದಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಒಂದೆ ಸಾರಿ ಸತ್ತರೆ ಒಳ್ಳೆಯದಲ್ಲವೆ ಎಂದು ಕೆಟ್ಟ ಆಲೋಚನೆಯಿಂದ ಸಾವಿನ‌ಮನೆಯ ಕದ ತಟ್ಟುತ್ತಿದ್ದಾರೆ.

ಜಿವನದಲ್ಲಿ ಏನೆ ಬಂದರೂ ಎದರಿಸಬೆಕು.ಕಷ್ಟ ಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತವೆಯೇ ಎಲ್ಲಿತ್ತೋ ಏನೊ ಈ ಕ್ರೂರಿ ಸೊಂಕು ಬಂದು ಎಲ್ಲರನ್ನು ಹೈರಾಣಾವಾಗಿಸಿದೆ.ಎನಾದರೂ ಸರಿಯೇ ಕೊನೆಯವರೆಗೂ ಹೊರಾಡಿ ಗೆಲ್ಲಬೆಕು.ಸೊಂಕಿನಿಂದ ಸಾವಿನ ದವಡೆಗೆವಹೊಗಿ ಅದೆಷ್ಡೋ ಮಂದಿ ಬದುಕಿ ಬಂದಿದ್ದಾರೆ.

ಸೊಂಕನ್ನು ಗೆದ್ದ ವೃದ್ದ ಜಿವಗಳು ಇವೆ ಹಾಗಾಗಿ ಯಾರೂ ಕೂಡ ಆತ್ಮವಿಶ್ವಾಸ ಕಳೆದು ಕೊಳ್ಳಬಾರದು ಬದುಕುವ ಭರವಸೆವಬೆಳಸಿ ಕೊಳ್ಳಬೆಕು.ನಮಗೆ ಏನಾಗುವುದಿಲ್ಲ ಚೆನ್ನಾಗಿರುತ್ತೆವೆ ಎಂಬ ಆಶಾಭಾವನೆ ಬೆಳೆಸಿ ಕೊಳ್ಳಬೆಕು ಅಪ್ಪಿತಪ್ಪಿಯೋ ಸಹ ಯರೋ ಸೊಂಕಿಗೆ ಹೆದರಿ ಕೆಟ್ಟ ನಿರ್ದಾರ ಮಾಡಬಾರದು ದೈರ್ಯವಾಗಿರಿ ಎಲ್ಲರೂ ಒಗ್ಗಾಟಾಗಿ ಸೊಂಕು ಓಡಿಸೊಣ.ಸಾಮಾಜಿಕ ಅಂತರ ಪಾಲಿಸಿ.ಅನಗತ್ಯವಾಗಿ ಒಡಾಡಬೆಡಿ.ಮಾಸ್ಕ್.ಸ್ಯಾನಿಟೈಸರ್.ಬಳಸಿ.ಸೊಂಕು‌ಒಡಿಸಿ.

Facebook Comments