ನಿಗಮ-ಮಂಡಳಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ಬೆಂಬಲಿಗರಿಗೆ ಕೋಕ್

Social Share

ಬೆಂಗಳೂರು,ಜು.20-ಇತ್ತೀಚೆಗಷ್ಟೇ ಕೆಲವು ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರ ಇದೀಗ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅೀಧಿನ ಕಾರ್ಯದರ್ಶಿ ಲತಾ.ಕೆ ಅವರು ಇಂದು ಅಧಿಸೂಚನೆ ಹೊರಡಿಸಿದ್ದು, ಇಂದು ಒಟ್ಟು 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೆಂಬಲಿಗರಿಗೆ ಕೋಕ್ ನೀಡಿರುವುದು ವಿಶೇಷವಾಗಿದೆ.

  1. ಹೆಚ್.ವಿ.ರಾಜೀವ್- ಮೈಸೂರು ನಗರಾಭಿವದ್ಧಿ ಪ್ರಾಧಿಕಾರ
  2. ಶಿವಕುಮಾರ್ ಸಂಗೂರ – ಹಾವೇರಿ ನಗರಾಭಿವದ್ಧಿ ಪ್ರಾಧಿಕಾರ
  3. ನಾಗೇಶ್ ಪುಂಡಲೀಕ- ಹುಬ್ಬಳ್ಳಿ-ಧಾರವಾಡ ನಗರಾಭಿವದ್ಧಿ ಪ್ರಾಧಿಕಾರ
  4. ಅಶೋಕ್ ಜೀರಾ- ಹೊಸಪೇಟೆ ನಗರಾಭಿವದ್ಧಿ ಪ್ರಾಧಿಕಾರ
  5. ರವಿಶಂಕರ ಮಿಜಾರ್- ಮಂಗಳೂರು ನಗರಾಭಿವದ್ಧಿ ಪ್ರಾಧಿಕಾರ
  6. ಸಿ.ಆನಂದ- ಚಿಕ್ಕಮಗಳೂರು ನಗರಾಭಿವದ್ಧಿ ಪ್ರಾಧಿಕಾರ
  7. ಲಲಾಟಮೂರ್ತಿ ಸಿದ್ದಪ್ಪ- ಹಾಸನ ನಗರಾಭಿವದ್ಧಿ ಪ್ರಾಧಿಕಾರ
  8. ಅಶ್ವಿನಿ- ಕೆಜಿಎಫ್ ನಗರಾಭಿವದ್ಧಿ ಪ್ರಾಧಿಕಾರ
  9. ಕೆ.ಎಸ್.ರಮೇಶ್ ಹೊಳ್ಳ- ಮಡಿಕೇರಿ ನಗರಾಭಿವದ್ಧಿ ಪ್ರಾಧಿಕಾರ
  10. ಬಸವಲಿಂಗಪ್ಪ ಕಾಶಿನಾಥ್‍ನವಲಗಿ – ಬಾಗಲಕೋಟೆ ನಗರಾಭಿವದ್ಧಿ ಪ್ರಾಧಿಕಾರ
  11. ದಯಾಗನ್ ಪ್ರಹ್ಲಾದ್ ರಾವ್ ಧಾರವಾಡಕರ್- ಕಲಬುರಗಿ ನಗರಾಭಿವದ್ಧಿ ಪ್ರಾಧಿಕಾರ
  12. ಪಿ.ವಿ.ಶಾಂತಮೂರ್ತಿ- ಚಾಮರಾಜನಗರ ನಗರಾಭಿವದ್ಧಿ ಪ್ರಾಧಿಕಾರ

Articles You Might Like

Share This Article