ಹಾಸ್ಯನಟ ಗಂಡಸಿ ನಾಗರಾಜ್ ನಿಧನ

Social Share

ಬೆಂಗಳೂರು, ಡಿ. 12- ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ಕಾಸ್ಟೂಮ್ ಡಿಸೈನರ್ ಹಾಗೂ ಹಾಸ್ಯ ನಟ ಗಂಡಸಿ ನಾಗರಾಜ್ ಅವರು ನಿಧನರಾಗಿದ್ದಾರೆ. ಗಂಡಸಿ ನಾಗರಾಜ್ ಅವರನ್ನು ನಿನ್ನೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಗಂಡಸಿ ನಾಗರಾಜ್‍ರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಬಾ.ಮಾ. ಹರೀಶ್ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ. ಗಂಡಸಿ ನಾಗರಾಜ್‍ರ ಅಂತ್ಯಕ್ರಿಯೆಯನ್ನು ಬನಶಂಕರಿಯ ಚಿತಾಗಾರದಲ್ಲಿ ಇಂದು ನೆರವೇರಿಸಲಾಗಿದೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಗಂಡಸಿ ನಾಗರಾಜ್ ಅವರು ನವರಸ ನಾಯಕ ಜಗ್ಗೇಶ್ ಅವರ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರಲ್ಲದೆ, ಜಗ್ಗೇಶ್‍ರೊಂದಿಗೆ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ಹಾಸ್ಯದಿಂದ ಜನರನ್ನು ನಕ್ಕು ನಲಿಸಿದ್ದಾರೆ.

ರೋಲ್‍ಕಾಲ್ ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲ: ಕಾಂಗ್ರೆಸ್

ಮೂಲತಃ ಟೈಲರ್ ಆಗಿದ್ದ ಗಂಡಸಿ ನಾಗರಾಜ್ 35 ವರ್ಷಗಳ ಕಾಲ ಸ್ಯಾಂಡಲ್‍ವುಡ್‍ನಲ್ಲಿ ಕಾಸ್ಟೂಮ್ ಡಿಸೈನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಭಂಡ ನನ್ನ ಗಂಡ',ಸರ್ವರ್ ಸೋಮಣ್ಣ’, ಹಬ್ಬ',ಮಾತಾಡ್ ಮಾತಾಡ್ ಮಲ್ಲಿಗೆ’, ಶಿಕಾರಿ' ಶ್ರೀ ಮಂಜುನಾಥ’, ರಾಜಹುಲಿ', ಗಂಡಸಿ ನಾಗರಾಜ್ ನಟನೆಯ ಕೆಲ ಹಿಟ್ ಸಿನಿಮಾಗಳಲ್ಲಿ ನಟಿ ಸಿದ್ದ ಗಂಡಸಿ ನಾಗರಾಜ್ ಅವರು ಕಿಚ್ಚ ಸುದೀಪ್ ನಟನೆಯಕೋಟಿ ಗೊಬ್ಬ- 3′ ಚಿತ್ರದಲ್ಲಿ ಕೊನೆಯ ಬಾರಿ ಅವರು ಬಣ್ಣ ಹಚ್ಚಿದ್ದರು.

Costume Designer, Actor, Gandasi Nagara,j Passes Away,

Articles You Might Like

Share This Article