ನಕಲಿ ಶೂ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ, 2 ಲಕ್ಷ ಮೌಲ್ಯದ ಶೂ ಜಪ್ತಿ

Social Share

ಬೆಂಗಳೂರು,ಅ.10- ಎರಡು ವಾಣಿಜ್ಯ ಅಂಗಡಿಗಳ ಮೇಲೆ ಕಾಟನ್‍ಪೇಟೆ ಠಾಣೆ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ನಕಲಿ ಶೂಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದೇವಿ ಎಂಟರ್‍ಪ್ರೈಸರ್ಸ್ ಹಾಗೂ ಐ ವಾಕ್ ಟ್ರೇಡರ್ಸ್ ಎಂಬ ಅಂಗಡಿಗಳಲ್ಲಿ ನಕಲಿ ಶೂಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಮೆಸರ್ಸ್ ಕ್ಯಾಟರ್‍ಪಿಲ್ಲರ್ ಐಎನ್‍ಸಿ(ಸಿಎಟಿ) ಕಂಪನಿ ಕಾಟನ್‍ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕಾರ್ಯಪ್ರವೃತ್ತರಾದರ ಪೊಲೀಸರು ಮನವರ್ತಿಪೇಟೆಯ ಎಂಆರ್ ಲೇನ್‍ನಲ್ಲಿರುವ ದೇವಿ ಎಂಟರ್‍ಪ್ರೈಸರ್ಸ್ ಹಾಗೂ ಐವಾಕ್ ಟ್ರೇಡರ್ಸ್ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 2 ಲಕ್ಷ ರೂ. ಮೌಲ್ಯದ ಕ್ಯಾಟರ್‍ಪಿಲ್ಲರ್ ಕಂಪನಿಯ ನಕಲಿ ಶೂಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article