ಬೆಂಗಳೂರು, ಫೆ 13- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ವರ್ಷದ ಮೊದಲ ಭೂ ವೀಕ್ಷಣಾ ಇಒಎಸï-04 ಉಪಗ್ರಹವನ್ನು ಪಿಎಸ್‍ಎಲ್‍ವಿ-ಸಿ 52 ಮೂಲಕ ಕಕ್ಷೆಗೆ ಸೇರಿಸುವ ಉಡಾವಣಾ ಕಾರ್ಯಾಚರಣೆಗೆ 25 ಗಂಟೆಗಳ ಕೌಂಟ್ಡೌನ್ ಮುಂಜಾನೆ ಆರಂಭವಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಅಂತಿಮ ಸಿದ್ದತೆ ಪೊರ್ಣಗೊಂಡಿದ್ದು ಸೋಮವಾರ ಬೆಳಿಗ್ಗೆ 5:59 ಗಂಟೆಗೆ ರಾಕೆಟ್ ಗಗನಕ್ಕೆ ಹಾರಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಉಡಾವಣೆಗೆ 25 ಗಂಟೆ 30 ನಿಮಿಷಗಳ ಕೌಂಟ್ಡೌನ್ ಪ್ರಕ್ರಿಯೆಯು ಇಂದು 04:29 ಗಂಟೆಗೆ ಪ್ರಾರಂಭವಾಗಿದೆ ಎಂದು ನಗರದ ಪ್ರಧಾನ ಕಛೇರಿಯ ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ.
ಸೂರ್ಯನ ಸಿಂಕ್ರೊನಸ್ ಧ್ರುವೀಯ 529 ಕಿ.ಮೀ ದೂರದ ಕಕ್ಷೆಯಲ್ಲಿ ಉಪಗ್ರಹ ಇಒಎಸï-04 ಸರಿಯಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ, 1,710 ಕೆಜಿ ತೂಕವಿದೆ. ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‍ನಂತಹ ಅಪ್ಲಿಕೇಶನ್‍ಗಳಿಗಾಗಿ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಈ ಯೋಜನೆಯಲ್ಲಿ ಎರಡು ಸಣ್ಣ ಉಪಗ್ರಹಗಳನ್ನು ಸಹಇದೆ ಮೊದಲನೆಯದ್ದು ವಿದ್ಯಾರ್ಥಿ ಉಪಗ್ರಹ ( INSPIREsat-1 ) ಸೇರಿದಂತೆ ಕೊಲೊರಾಡೋ ವಿಶ್ವವಿದ್ಯಾಲಯದ ಬೌಲ್ಡರ್‍ನಲ್ಲಿರುವ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ( NTU) ಸಿಂಗಾಪುರ ಮತು (NCU)ತೈವಾನ್‍ಉಪಗ್ರಹವಿದೆ.
ಇನ್ನೊಂದು ತಂತ್ರಜ್ಞಾನ ಪ್ರದರ್ಶಕ ಉಪಗ್ರಹ (INS-2TD, ), ಇದು ಭಾರತ-ಭೂತಾನ್ ಜಂಟಿ ಉಪಗ್ರಹ ಸಿದ್ದಪಡಿಸಿದ್ದು ಪೂರ್ವಗಾಮಿಯಾಗಿದೆ. ಥರ್ಮಲ್ ಇಮೇಜಿಂಗ್ ಕ್ಯಾಮರಾವನ್ನು ತನ್ನ ಪೇಲೋಡ್ ಆಗಿ ಹೊಂದಿರುವ ಉಪಗ್ರಹವು ಭೂಮಿಯ ಮೇಲ್ಮೈ ತಾಪಮಾನ, ಜೌಗು ಪ್ರದೇಶ ಅಥವಾ ಸರೋವರಗಳ ನೀರಿನ ಮೇಲ್ಮೈ ತಾಪಮಾನ, ಸಸ್ಯವರ್ಗದ ವಿವರಣೆ (ಬೆಳೆಗಳು ಮತ್ತು ಅರಣ್ಯ) ಮತ್ತು ಉಷ್ಣ ಜಡತ್ವ (ಹಗಲು ಮತ್ತು ರಾತ್ರಿ) ಮೌಲ್ಯಮಾಪನಕ್ಕೆ ಪ್ರಯೋಜನವನ್ನು ನೀಡುತ್ತದೆ .ಇಸ್ರೋದ ವಿಜ್ಞಾನಿಗಳು ಯಶಸಿಗೆ ಎಲ್ಲಾ ತಯಾರಿ ಮಾಡಿಕೊಂದಿದೆ ಅಲವು ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
