ಗೋವಾ ಪಂಚಾಯತ್ ಚುನಾವಣೆಯ ಮತ ಎಣಿಕೆ ಶುರು

Social Share

ಪಣಜಿ, ಆ.12 – ಗೋವಾದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆ ಪಂಚಾಯತ್ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, 5,000ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧರವಾಗಲಿದ್ದು ಆರಂಭದಲ್ಲೇ ಆಡಳಿತಾರೂಢ ಬಿಜೆಪಿ ಬೆಂಬಲಿಗರು ಜಯಗಳಿಸಿದ್ದಾರೆ.

ರಾಜ್ಯದ 12 ತಾಲೂಕಿನ 186 ಪಂಚಾಯತ್‍ಗಳಿಗೆ ನಡೆದಿದ್ದ ಚುನಾವಣೆಗೆ 21 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮತಪತ್ರಗಳನ್ನು ಬಲಸಲಾಗಿದ್ದು ಒಟ್ಟು 1,464 ವಾರ್ಡ್‍ಗಳಲ್ಲಿ 5,038 ಅಭ್ಯರ್ಥಿಗಳು ಕಣದಲ್ಲಿದ್ದರು, ಈಗಾಗಲೆ ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಪಕ್ಷದ ಚಿಹ್ನೆ ಇಲ್ಲದೆ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಎದುರಿಸಿದ್ದಾರೆ.

ಪಂಚಾಯತ್ ಚುನಾವಣೆಗೆ ಶೇ.78.70ರಷ್ಟು ಮತದಾನವಾಗಿತ್ತ ಒಟ್ಟು 6,26,496 ಮತದಾರರು ಮತ ಚಲಾಯಿಸಿದ್ದರು
ಉತ್ತರ ಗೋವಾದಲ್ಲಿ ಶೇ.81.45ರಷ್ಟು ಮತದಾನವಾಗಿದ್ದರೆ, ದಕ್ಷಿಣ ಗೋವಾದಲ್ಲಿ ಶೇ.76.13ರಷ್ಟು ಮತದಾನವಾಗಿದೆ.

ಉತ್ತರ ಗೋವಾದ ಸತ್ತಾರಿ ತಾಲೂಕಿನಲ್ಲಿ ಅತಿ ಹೆಚ್ಚು ಶೇ.89.30ರಷ್ಟು ಮತದಾನವಾಗಿದ್ದು, ದಕ್ಷಿಣ ಗೋವಾದ ಸಾಲ್ಸೆಟ್ಟೆ ತಾಲೂಕಿನಲ್ಲಿ ಅತಿ ಕಡಿಮೆ ಮತದಾನವಾಗಿದೆ. ವಿವಿಧ ಗ್ರಾಮ ಪಂಚಾಯಿತಿಗಳಿಂದ ಒಟ್ಟು 64 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅದರಲ್ಲಿ 41 ಉತ್ತರ ಗೋವಾ ಮತ್ತು 23 ದಕ್ಷಿಣ ಗೋವಾದಿಂದ ಆಯ್ಕೆಯಾಗಿದ್ದಾರೆ.

ಉತ್ತರ ಗೋವಾ ಜಿಲ್ಲಾಯಲ್ಲಿ 97 ಪಂಚಾಯಿತಿಗಳಿದ್ದು, 2,667 ಅಭ್ಯರ್ಥಿಗಳು ಸ್ರ್ಪಧಿಸಿದ್ದರು, ದಕ್ಷಿಣ ಗೋವಾದ 89 ಪಂಚಾಯಿತಿಗಳಿಗೆ 2,371ಕಣದಲಿದ್ದರು.

Articles You Might Like

Share This Article