ದೇಶ ಬಹುತೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿದೆ : ಷಾ

Social Share

ನವದೆಹಲಿ, ಅ.21-ಭಾರತದ ಆಂತರಿಕ ಭದ್ರತೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಸಕಾರಾತ್ಮಕ ಬದಲಾವಣೆಗಳಾಗಿದ್ದು, ದೇಶ ಬಹುತೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ದೆಹಲಿಯಲ್ಲಿ ಪೊಲೀಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಭಾರತದ ಭದ್ರತೆ ಹೆಮ್ಮೆಯ ಘಟ್ಟ ತಲುಪಿದೆ. ಪ್ರತಿಯೊಬ್ಬರಲ್ಲೂ ಭದ್ರತೆಯ ಸಂತೃಪ್ತ ಭಾವವಿದೆ ಎಂದು ಹೇಳಿದರು.

ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿನ ಹಲವು ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ನಕ್ಸಲಿಸಂ ಸೇರಿದಂತೆ ಇತರ ಶಾಂತಿಭಂಗದ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ಈಶಾನ್ಯ ರಾಜ್ಯಗಳಲ್ಲಿ ನಕ್ಸಲ್ ಪ್ರೇರಿತ ಚಟುವಟಿಕೆಗಳನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಆ ಭಾಗದ ಯುವಕರಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿಶೇಷ ಅಧಿಕಾರ ಪ್ರಾಪ್ತವಾಗಿದೆ. ಹೀಗಾಗಿ ಈಶಾನ್ಯ ಭಾಗದಲ್ಲಿ ಶೇ.70ರಷ್ಟು ಘಟನೆಗಳು ಕಡಿಮೆಯಾಗಿವೆ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಸಾಮಾನ್ಯವಾಗಿತ್ತು. ಈಗ ದುಷ್ಕøತ್ಯಗಳಲ್ಲಿ ತೊಡಗುತ್ತಿದ್ದ ಯುವಕರೇ ಪ್ರಜಾಸತ್ತಾತ್ಮಕ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನ ಯುವಕರು, ಪಂಚರು-ಸರಪಂಚರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಎಡಪಂಥೀಯ ಸಿದ್ಧಾಂತ ಪ್ರೇರಿತ ಪ್ರದೇಶಗಳಲ್ಲಿ ಈಗ ರಾಷ್ಟ್ರಗೀತೆಗಳು ಮೊಳಗುತ್ತಿವೆ. ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿದೆ. ಏಕಲವ್ಯ ಶಾಲೆಗಳಲ್ಲಿ ನಿರ್ಭಯವಾಗಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಹಲವಾರು ಕ್ರಮಗಳಿಂದಾಗಿ ಭಾರತದ ಆಂತರಿಕ ಭದ್ರತೆ ದೃಢೀಕರಣಗೊಂಡಿದೆ.

ರಾಯಚೂರು ತಲುಪಿದ ರಾಹುಲ್ ಭಾರತ್ ಜೋಡೋ ಯಾತ್ರೆ

ದೇಶದ ಪೊಲೀಸ್ ಬಲ ಮತ್ತು ಸಿಎಪಿಎಫ್ ಪಡೆಗಳು ಸಾಕಷ್ಟು ಮುಂಜಾಗ್ರತೆ ವಹಿಸಿವೆ. ಸಾಮೂಹಿಕ ಚಟುವಟಿಕೆಗಳ ಮೂಲಕ ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲಾಗಿದ್ದು, ಹಾಟ್‍ಸ್ಪಾಟ್‍ಗಳಲ್ಲಿ ದೇಶವಿರೋಧಿ ಚಟುವಟಿಕೆಗಳು ಸಂಪೂರ್ಣ ಮುಕ್ತವಾಗಿವೆ ಎಂದರು.

ಭಾರತ ಇಂದು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳ ಬಳಿಕ ನಮ್ಮ ಗುರಿ ತಲುಪಲು ವೇಗವಾಗಿ ಮತ್ತು ದೃಢವಾಗಿ ಮುನ್ನುಗ್ಗುವ ಆತ್ಮವಿಶ್ವಾಸ ನಮ್ಮಲ್ಲಿ ಮೂಡಿದೆ. ಈ ಎಲ್ಲ ಚಟುವಟಿಕೆಗಳಿಗೆ ನಮ್ಮ ದೇಶದ ಸೈನಿಕರ ಅತ್ಯುನ್ನತ ತ್ಯಾಗ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ದೇಶಾದ್ಯಂತ ವಿವಿಧ ಸಂಘರ್ಷಗಳಲ್ಲಿ 35 ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು ಕೇಂದ್ರ ಪೊಲೀಸ್ ಪಡೆಗಳು ತಮ್ಮ ಜೀವತ್ಯಾಗ ಮಾಡಿವೆ. ಅವರಿಗೆ ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಶೌರ್ಯ ತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ಸರ್ಕಾರ ಬೆನ್ನೆಲುಬಾಗಲಿದೆ. ಭದ್ರತೆಯ ವಿಶ್ವಾಸ ಹೊಂದಿರುವ ದೇಶ ಅಭಿವೃದ್ಧಿಯತ್ತ ಹೆಜ್ಜೆ ಹಾಕಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಹೈಕೋರ್ಟ್ ಆದೇಶ

ಚೀನಾದ ಗಡಿಭಾಗದಲ್ಲಿ 1959ರ ಅಕ್ಟೋಬರ್ 21ರಂದು ಭಾರತೀಯ ಯೋಧರು ಚೀನಾ ಪಡೆಗಳೊಂದಿಗೆ ಸಂಘರ್ಷ ನಡೆಸಿ ಜೀವ ತ್ಯಾಗ ಮಾಡಿವೆ. ಚೀನಾದ ಯಾಂತ್ರೀಕೃತ ಯುದ್ಧ ಸಲಕರಣೆಗಳ ಜತೆ ನಮ್ಮ ಯೋಧರ ಹೋರಾಟ ಶ್ಲಾಘನೀಯ ಎಂದರು.

Articles You Might Like

Share This Article