ಪಾಲ್ಘರ್,ಸೆ.27- ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರರನ್ನು ತಡೆಯಲು ಮುಂದಾದ ಮಹಿಳಾ ಪೊಲೀಸ್ ಕಾನ್ಸ್‍ಟೆಬಲ್‍ರನ್ನು ತಳ್ಳಿ ಪರಾರಿಯಾಗಿದ್ದ ದಂಪತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಕಾನ್ಸ್‍ಟೆಬಲ್ ಪ್ರಜ್ಞೆ ಶಿರಾಮ್ ದಲ್ವಿ (36) ಅವರ ಕಾಲು ಮತ್ತು ಕೈಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿ ವಕೀಲ ಬ್ರಿಜೇಶ್ ಕುಮಾರ್ ಬೊಲೊರಿಯಾ ಮತ್ತು ಅವರ ಪತ್ನಿ ಡಾಲಿ ಕುಮಾರಿ ಸಿಂಗ್ ಅವರನ್ನು ಬಂಧಿಸಲಾಗಿದೆ.
ಬೈಕ್ ಅನ್ನು ಜಪ್ತಿ ಮಾಡಲಾಗಿತ್ತು. ಆದರೆ ಬೊಲೊರಿಯಾ ತಮ್ಮ ಪತ್ನಿ ಜೊತೆ ಬಂದು ಅದನ್ನು ಬಲವಂತವಾಗಿ ತೆಗೆದುಕೊಂಡು ಹೋಗುವಾಗ ನಮ್ಮ ಸಿಬ್ಬಂದಿ ತಡೆದರೂ ಪರಾರಿಯಾಗಿದ್ದರು ಎಂದು ಇನ್ಸ್‍ಪೆಕ್ಟರ್ ವಿಲಾಸ್ ಸುಪೆ ತಿಳಿಸಿದ್ದಾರೆ.