ದೇಶದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೋನಾ, 24 ಗಂಟೆಯಲ್ಲಿ 206 ಮಂದಿ ಸಾವು

Social Share

ನವದೆಹಲಿ, ಫೆ.21-ದೇಶದಲ್ಲಿ ಕೊರೊನಾ ಅಂತ್ಯವಾಗುವಂತೆ ಕಾಣುತ್ತಿದೆ. ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಕೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 16,051 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 206 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಒಂದೇ ದಿನದಲ್ಲಿ 37,901 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 4,21,24,284 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಂತಾಗಿದ್ದು, ಗುಣಮುಖರಾಗಿರುವವರ ಪ್ರಮಾಣ ಶೇ.98.33ರಷ್ಟಿದೆ. ನಿನ್ನೆ 206 ಮಂದಿ ಸಾವನ್ನಪ್ಪಿರುವುದು ಸೇರಿದಂತೆ ಒಟ್ಟಾರೆ ಕೊರೊನಾಗೆ 5,12,109 ಮಂದಿ ಮೃತಪಟ್ಟಿದ್ದಾರೆ.
ಪ್ರಸ್ತುತ ದೇಶದಲ್ಲಿ ಶೇ.1.2ರಷ್ಟು ಮಾತ್ರ ಸೋಂಕಿನಿಂದ ಸಾವಿನ ಪ್ರಮಾಣ ಇದೆ. ಸಕ್ರಿಯ ಸೋಂಕಿತರ ಸಂಖ್ಯೆ 2,02,131 ಮಾತ್ರ ಇದ್ದು, ಪಾಸಿಟಿವ್ ರೇಟ್ ಶೇ.1.90ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೊರೊನಾ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದು, ದೇಶದಲ್ಲಿ ಈವರೆಗೆ ಸುಮಾರು 1,75,46,25,710 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ.

Articles You Might Like

Share This Article