ನವದೆಹಲಿ,ಮಾ.10- ಮಹಾಮಾರಿ ಕೊರೊನಾ ಸೋಂಕಿಗೆ ದೇಶದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ.
ಕರ್ನಾಟಕ, ರಾಜಸ್ತಾನ ಹಾಗೂ ಕೇರಳದಲ್ಲಿ ಕೊರೊನಾ ಮಹಾಮಾರಿಗೆ ಒಬ್ಬೊಬ್ಬರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ದೇಶದಲ್ಲಿ 440 ಹೊಸ ಕರೋನವೈರಸ್ ಸೋಂಕುಗಳು ದಾಖಲಾಗಿದ್ದು, ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 3,294 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜಂತರ್‌ಮಂತರ್‌ನಲ್ಲಿ ಕೆ.ಕವಿತಾ ಉಪವಾಸ ಸತ್ಯಾಗ್ರಹ
ರಾಜಸ್ಥಾನದಲ್ಲಿ ಒಂದು ಸಾವು, ಕರ್ನಾಟಕದಿಂದ ಒಂದು ಸಾವು ಮತ್ತು ಕೇರಳದಿಂದ ಒಂದು ಸಾವು ವರದಿಯಾಗಿರುವುದರಿಂದ ಒಟ್ಟು ಸಾವಿನ ಸಂಖ್ಯೆ 5,30,779ಕ್ಕೆ ಏರಿಕೆಯಾಗಿರುವುದು ಕಂಡು ಬಂದಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ ರಷ್ಟಿದ್ದು, ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು 98.80 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,55,439 ಕ್ಕೆ ಏರಿಕೆಯಾಗಿದ್ದರೂ ಸಾವಿನ ಪ್ರಮಾಣವು ಶೇ. 1.19 ರಷ್ಟಿದೆ ಎಂದು ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಸಂಕೇತ : ಮೋದಿ
ಕೊರೊನಾ ಕಾಣಿಸಿಕೊಂಡ ನಂತರ ದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.64 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
Covid Cases, 3 Death, India,