ತುಮಕೂರು,ಜ.22- ಬಿಪಿಎಲ್ ಕಾರ್ಡ್ ಇದ್ದ ಕುಟುಂಬಸ್ಥ ಕೋವಿಡ್ ನಿಂದ ಮೃತಪಟ್ಟವರಿಗೆ ತಾಂತ್ರಿಕ ದೋಷದಿಂದ ಇನ್ನೂ ಸೂಕ್ತ ಪರಿಹಾರ ಸಿಗದಂತಾಗಿದ್ದು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ವೇಲೇರ್ ಪಾರ್ಟಿ ಆಫ್ ಇಂಡಿಯಾ ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ವೇಲೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಸರಕಾರವು ಕೋವಿಡ್ ನಿಂದ ಮೃತಪಟ್ಟರೆ 1 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.
ಆದರೆ, ದಾಖಲಾತಿ ನೀಡುವ ಸಂದರ್ಭದಲ್ಲಿ ಮೃತಪಟ್ಟ ಸಂಬಂಧಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಕಾರಣ ಸರಿಯಾಗಿ ಖಾಸಿಗೆ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೂಕ್ತ ಮಾಹಿತಿ ರವಾನೆ ಆಗುತ್ತಿಲ್ಲ ಎಂದು ದೂರಿದರು.
ಅದೇ ರೀತಿ ಅಧಿಕಾರಿಗಳು ಯಾವುದೇ ಕಾಳಜಿ ವಹಿಸುತ್ತಿಲ್ಲ ಸಮಸ್ಯೆಗಳ ಸಮಸ್ಯೆ ಆಗ್ತಾಯಿದೆ ಕೋವಿಡ್ ನಿಂದ ಮೃತಪಟ್ಟವರ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಎಷ್ಟು ಸರಿ ಎಂದಿದ್ದಾರೆ.
ಸರಕಾರವು ಕೂಡಲೇ ಎಚ್ಚೆತ್ತುಗೊಂಡು ಸೂಕ್ತ ರೀತಿಯಿಂದ ಈ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಬಡ ಕುಟುಂಬರ ನೆರವಿಗಾಗಿ ಉಗ್ರ ಹೊರಾಟ ನಡೆಸಬೇಕಾಗುತೆ.
ಆದ್ದರಿಂದ ಸರಕಾರದ ಜವಾಬ್ದಾರಿಯುತರು ಈ ಬಡ ಕುಟುಂಬಗಳಿಗೆ ಶೀಘ್ರ ಪರಿಗಾರ ಹಣ ನಿಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ವಿದ್ಯಾರ್ಥಿ ಮುಖಂಡ ಶಾಕಿರ್ ಇದ್ದರು.
