ಕೋವಿಡ್‍ನಿಂದ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ಪರಿಹಾರ

Social Share

ಬೆಂಗಳೂರು,ಫೆ.22-ಕೋವಿಡ್‍ನಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಒಟ್ಟು 466 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು.

ವಿಧಾನಪರಿಷತ್‍ನಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್-19 ಮೀಡಿಯಾ ಬುಲೆಟಿನ್‍ನಲ್ಲಿ 16,999 ಮಂದಿ ಮೃತಪಟ್ಟಿರುವುದಾಗಿ ದಾಖಲಾಗಿದೆ. ಈ ಪೈಕಿ 10,137 ಅರ್ಜಿಗಳು ಪರಿಹಾರಕ್ಕಾಗಿ ಸಲ್ಲಿಕೆಯಾಗಿವೆ. ಅವುಗಳಲ್ಲಿ 3450 ಬಿಪಿಎಲ್ ಪ್ರಕರಣಗಳಿವೆ. ಕೇಂದ್ರ ಸರ್ಕಾರ 50 ಸಾವಿರ ರೂ.ಗಳನ್ನು, ರಾಜ್ಯ ಸರ್ಕಾರ 1 ಲಕ್ಷ ರೂ.ಗಳನ್ನು ಘೋಷಣೆ ಮಾಡಿದೆ.

IAS- IPS ಬೀದಿ ಜಗಳಕ್ಕೆ ಮತ್ತೊಂದು ಟ್ವಿಸ್ಟ್

ಮೀಡಿಯಾ ಬುಲೆಟಿನ್‍ನಲ್ಲಿ ನಮೂದಾಗದೆ ಇರುವ ಪ್ರಕರಣಗಳನ್ನು ಪರಿಶೀಲಿಸಲು ಕಾರ್ಯಪಡೆಯನ್ನು ರಚಿಸಲಾಗಿದೆ. ಬಿಪಿಎಲ್ ವ್ಯಾಪ್ತಿಗೊಳಪಡುವ 3450 ಪ್ರಕರಣಗಳಲ್ಲಿ ರಾಜ್ಯ ಸರ್ಕಾರ 1 ಲಕ್ಷ ರೂ.ಗಳನ್ನು 3399 ಕುಟುಂಬಗಳಿಗೆ ನೀಡಿವೆ. 51 ಪ್ರಕರಣಗಳಲ್ಲಿ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಇರುವುದರಿಂದ ಪರಿಶೀಲಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ದತ್ತಾಂಶ ಲಭ್ಯವಿಲ್ಲದ 7388 ಅರ್ಜಿಗಳು ಸ್ವೀಕಾರವಾಗಿದ್ದು, ಇವುಗಳಲ್ಲಿ 2651 ಬಿಪಿಎಲ್ ಪ್ರಕರಣಗಳಿವೆ ಎಂದು ವಿವರಿಸಿದರು.

ಇಂದು ಬಿಜೆಪಿ ಸೇರಲಿದ್ದಾರೆ ಹಿರಿಯ ನಟ ಅನಂತನಾಗ್

ಕೇಂದ್ರ ಸರ್ಕಾರದ ಪರಿಹಾರವಾದ 50 ಸಾವಿರ ರೂ.ಗಳನ್ನು 2022ರ ಜನವರಿ 10ವರೆಗೆ 6796 ಪ್ರಕರಣಗಳಲ್ಲಿ ಪಾವತಿಸಲಾಗಿದೆ ಎಂದು ತಿಳಿಸಿದರು.

covid, died, families, 466 crore, compensation,

Articles You Might Like

Share This Article