ಈ ಹೊಸ ಲಸಿಕೆ ಹಾಕಿಸಿಕೊಂಡರೆ ಜ್ವರ, ಮೈಕೈ ನೋವು ಬರಲ್ಲ

Social Share

ಬೆಂಗಳೂರು,ಡಿ.24- ಲಸಿಕೆ ಹಾಕಿಸಿಕೊಂಡ್ರೆ ಜ್ವರ ಬರುತ್ತೆ. ಈಗಾಗಲೇ ಎರಡು ಡೋಸ್‍ಗಳನ್ನು ಪಡೆದಿದ್ದೇವೆ. ಮತ್ತೆ ಇನ್ನೊಂದು ಡೋಸ್‍ಗೆ ಸರದಿ ಸಾಲಿನಲ್ಲಿ ನಿಲ್ಲಲು ಟೈಮ್ ಎಲ್ಲಿದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇಲ್ಲಿದೆ.
ಈ ಹಿಂದೆ ಪಡೆದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತಿತರ ಲಸಿಕೆಗಳಿಗಿಂತ ವಿಭಿನ್ನ ಹಾಗೂ ಭಾವಿಶಾಲಿಯಾಗಿರುವ ಹೊಸ ಲಸಿಕೆ ಇದೀಗ ಮಾರುಕಟ್ಟೆಗೆ ಬಂದಿದೆ.

ಈ ಲಸಿಕೆ ಹಾಕಿಸಿಕೊಂಡ್ರೇ ಜ್ವರನೂ ಬರಲ್ಲ, ಮೈ ಕೈ ನೋವು ಕಾಣಿಸಿಕೊಳ್ಳಲ್ವಂತೆ ಅದೆ ಭಾರತ್ ಬಯೋಟೆಕ್ ಸಂಸ್ಥೆ ಸಿದ್ದಪಡಿಸಿರುವ ಇನ್‍ಕೋವ್ಯಾಕ್ ಲಸಿಕೆ.

ಈ ಲಸಿಕೆ ಹಾಕಲು ವೈದ್ಯರೇ ಬೇಕಾಗಿಲ್ಲ. ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವಂತಿಲ್ಲ. ಇದನ್ನು ಮೂಗಿನ ಹೊಳ್ಳೆಗಳಿಗೆ ಎರಡು ಹನಿ ಹಾಕಿದರೆ ಸಾಕು ನಿಮಗೆ ಸೋಂಕು ಹರಡುವುದಿಲ್ಲ. ಮೂಗಿನ ಹೊಳ್ಳೆ ಮೂಲಕ ಹಾಕುವ ಈ ಡ್ರಾಪ್ ಹಿಂದಿನ ನೇಸಲ್ ಡ್ರಾಪ್ಸ್‍ಗಿಂತ ವಿಭಿನ್ನ ಹಾಗೂ ಪ್ರಭಾವಶಾಲಿಯಾಗಿರಲಿದೆ.

ದೆಹಲಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ, ರಾಹುಲ್ ಜೊತೆ ಹೆಜ್ಜೆ ಹಾಕಿದ ಸೋನಿಯಾ, ಪ್ರಿಯಾಂಕಾ

ಕೊರೊನಾ ವೈರಸ್ ದೇಹ ಸೇರೋದು ಮೂಗು ಅಥವಾ ಗಂಟಲಿನ ಮಾರ್ಗವಾಗಿ ನಂತರ ಅದು ಶ್ವಾಸಕೋಶಕ್ಕೆ ತಲುಪುತ್ತದೆ. ವೈರಸ್ ತಲುಪೊ ಮಾರ್ಗದಲ್ಲೇ ಇನ್‍ಕೋವ್ಯಾಕ್ಸ್ ಡ್ರಾಪ್ಸ್ ಹಾಕಲಾಗುತ್ತದೆ. ಅದು ನೇರವಾಗಿ ಗಂಟಲಿಗೆ ತಲುಪಿ ಸೋಂಕು ತಗುಲದಂತೆ ನೋಡಿಕೊಳ್ಳುತ್ತದೆ.

ಬಿಬಿಎಂಪಿ ಅಧಿಕಾರಿಗಳ ಸಭೆ : ಹೊಸ ವರ್ಷಾಚರಣೆಗೆ ಹೊಸ ನಿಯಮ

ಕೊರೊನಾ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ಮೈ ಕೈ ನೋವು ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವವರು ಈ ಹೊಸ ಮಾದರಿಯ ನೇಸಲ್ ಡ್ರಾಪ್ ಪಡೆದುಕೊಂಡು ಸೋಂಕು ಮುಕ್ತರಾಗಬಹುದಾಗಿದೆ.

COVID, nasal, vaccine, Incovacc, booster dose,

Articles You Might Like

Share This Article