ಸದ್ಯದಲ್ಲೇ ಕೊರೋನಾ ಯುಗ ಕೊನೆಗೊಳ್ಳಲಿದೆ : ಖ್ಯಾತ ವೈರಲಾಜಿಸ್ಟ್ ಕುತುಬ್ ಮೆಹಬೂಬ್

Social Share

ವಾಷಿಂಗ್ಟನ್, ಜ.16- ವೈರಸ್ ತೊಲಗಲಿದೆ… ನಾವು ಮಾಸ್ಕ್‍ನಿಂದ ಹೊರಬಂದು ಕೊರೊನಾ ಪಿಡುಗನ್ನು ಜಯಿಸುತ್ತೇವೆ ಎಂಬ ಆಶಾಭಾವನೆಯಿಂದ ಮುನ್ನುಗ್ಗಬೇಕು. ಸದ್ಯದಲ್ಲೇ ಎಲ್ಲವೂ ಮುಗಿಯಲಿದೆ ಎಂದು ವಾಷಿಂಗ್ಟನ್‍ನಲ್ಲಿರುವ ವಿಜ್ಞಾನಿ ಮತ್ತು ವೈರಲಾಜಿಸ್ಟ್ ಡಾ.ಕುತುಬ್ ಮೆಹಬೂಬ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಮೂರನೆ ಅಲೆ ಭೀತಿ ಮುಂದುವರೆದು ತಲ್ಲಣದ ಸಂದರ್ಭದಲ್ಲಿ ಇವರ ಮಾತು ಭರವಸೆ ಮೂಡಿಸಿದೆ. ಕೋವಿಡ್ ಈ ವರ್ಷದಲ್ಲಿ ಕೊನೆಯಾಗಲಿದೆ. ಈ ವೈರಸ್‍ಗೆ ಲಸಿಕೆಯೇ ಬಲಿಷ್ಠ ಅಸ್ತ್ರ ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪಿಡುಗು ಅಂತ್ಯವಾಗುವ ಕಾಲ ಹತ್ತಿರದಲ್ಲಿದೆ. ಈ ಚೆಸ್ ಆಟದಲ್ಲಿ ಯಾರೂ ವಿನ್ನರ್ ಅಲ್ಲ, ಇದು ಡ್ರಾ ಆಗಲಿದೆ. ವೈರಸ್ ಅಡಗಿಕೊಳ್ಳುತ್ತದೆ. ನಾವು ಮಾಸ್ಕ್‍ನಿಂದ ಹೊರಬಂದು ಜಯಿಸುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಮನುಷ್ಯರಲ್ಲಿ ರೋಗ-ನಿರೋಧಕ ಶಕ್ತಿ ವೃದ್ಧಿಯಾಗುತ್ತಿದ್ದು, ಇದಕ್ಕೆ ಹೊಂದಿಕೊಳ್ಳಲು ವೈರಸ್ ಮೇಲೆ ಒತ್ತಡವಾಗುತ್ತಿದೆ. ಆದ್ದರಿಂದ ಇದು ರೂಪಾಂತರವಾಗುತ್ತಿದೆ. ಇದೊಂದು ರೀತಿ ಮನುಷ್ಯ ಮತ್ತು ವೈರಸ್ ನಡುವಿನ ಹೋರಾಟವಾಗಿದೆ. ನಾವು ನಮ್ಮ ನಡೆ ಮುಂದುವರೆಸಿದರೆ ವೈರಸ್ ತನ್ನ ಆಟವಾಡುತ್ತದೆ.
ನಮ್ಮ ನಡೆ ಅಂದರೆ ಫೇಸ್‍ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಸಾಮಾಜಿಕ ಅಂತರದೊಂದಿಗೆ ಲಸಿಕೆ ಅಸ್ತ್ರ ಬಳಸಬೇಕು. ಹಾಗಾದರೂ ಕೋವಿಡ್ ರೂಪಾಂತರಿ ಬರುವುದಿಲ್ಲ ಎಂದಲ್ಲ, ಮುಂದೆ ಮತ್ತೊಂದು ರೂಪಾಂತರಿ ಬಂದರೂ ಅಚ್ಚರಿ ಇಲ್ಲ. ಆದರೆ, ಇದಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಲಿದೆ. ಅದಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಭಾರತದಲ್ಲಿ ಒಂದೇ ವರ್ಷದಲ್ಲಿ ಶೇ.60ರಷ್ಟು ಲಸಿಕಾಕರಣವಾಗಿರುವುದನ್ನು ಡಾ.ಕುತುಬ್ ಪ್ರಶಂಸಿಸಿದ್ದಾರೆ. ಇದು ನಿಜಕ್ಕೂ ದೇಶದ ಮತ್ತು ಲಸಿಕಾ ತಯಾರಿಕಾ ಸಂಸ್ಥೆಯ ಸಾಧನೆ. ಈಗಾಗಲೇ ಭಾರತದ ಲಸಿಕೆ ಜಗತ್ತಿನಾದ್ಯಂತ ಬಳಕೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

Articles You Might Like

Share This Article