ಸಿಕ್ಕ ಸಿಕ್ಕವರಿಗೆಲ್ಲ ಕೋವಿಡ್ ಟೆಸ್ಟ್ ಅಗತ್ಯವಿಲ್ಲ

Social Share

ಬೆಂಗಳೂರು, ಜ.15- ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಟೆಸ್ಟಿಂಗ್ ಅಗತ್ಯ. ಆದರೆ, ಸಿಕ್ಕ ಸಿಕ್ಕವರಿಗೆಲ್ಲ ಟೆಸ್ಟಿಂಗ್ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕೋವಿಡ್ ಟೆಸ್ಟಿಂಗ್ ವಿಧಾನ ಬದಲಿಸುವಂತೆ ಐಸಿಎಂಆರ್ ಸಲಹೆ ನೀಡಿದ್ದು, ಯಾರಿಗೆ ಕೋವಿಡ್ ಟೆಸ್ಟ್ ಬೇಕು, ಬೇಡ ಎಂಬುದರ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದೆ. ಬದಲಾದ ಕೊರೊನಾ ಸನ್ನಿವೇಶಕ್ಕೆ ತಕ್ಕಂತೆ ಟೆಸ್ಟಿಂಗ್ ಯೋಜನೆ ಬದಲಾಯಿಸುವಂತೆ ಸಲಹೆ ನೀಡಲಾಗಿದೆ. ಯಾರಿಗೆ ರೋಗ ಲಕ್ಷಣಗಳು ಇರುತ್ತವೆಯೋ ಅಂತವರನ್ನು ಕೋವಿಡ್ ಟೆಸ್ಟ್‍ಗೆ ಒಳಪಡಿಸಿ.
ಸೋಂಕು ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕರದಲ್ಲಿರುವ, ಹೈ-ರಿಸ್ಕ್ ವ್ಯಕ್ತಿಗಳನ್ನು ಟೆಸ್ಟ್‍ಗೆ ಒಳಪಡಿಸಬೇಕು. ಅಂದರೆ 60 ವರ್ಷ ಮೇಲ್ಪಟ್ಟವರ ಟೆಸ್ಟಿಂಗ್ ಮಾಡುವುದು, ಇತರ ಆರೋಗ್ಯ ಸಮಸ್ಯೆ ಇದ್ದವರಿಗೆ ಟೆಸ್ಟ್ ಮಾಡುವುದು.ಅಂತಾರಾಷ್ಟ್ರೀಯ ಪ್ರಯಾಣಿಕರನ್ನ ಟೆಸ್ಟ್ ಮಾಡುವುದು.
ಹೆರಿಗೆ, ಶಸ್ತ್ರ ಚಿಕಿತ್ಸೆಗೆಂದು ಕೋವಿಡ್ ಟೆಸ್ಟ್ ಮಾಡುವ ಅಗತ್ಯ ಇಲ್ಲ.ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎಂದು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವಂತಿಲ್ಲ.ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವಾರಕ್ಕೆ ಒಂದು ಸಾರಿ ಮಾತ್ರ ಕೋವಿಡ್ ಟೆಸ್ಟ್ ಮಾಡಬೇಕು. ಅದಕ್ಕಿಂತ ಹೆಚ್ಚು ಟೆಸ್ಟ್ ಮಾಡುವಂತಿಲ್ಲ. ಯಾವುದೇ ರೋಗ ಲಕ್ಷಣಗಳು ಇಲ್ಲದವರಿಗೆ ಕೋವಿಡ್ ಟೆಸ್ಟ್ ಅಗತ್ಯವಿಲ್ಲ.
ಸೋಂಕು ದೃಢಪಟ್ಟ ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಟೆಸ್ಟ್ ಬೇಕಿಲ್ಲ. ಹೋಂ ಐಸೋಲೇಷನ್‍ನಲ್ಲಿದ್ದು, ಡಿಸ್ಜಾರ್ಜ್ ಆದವರಿಗೆ ಟೆಸ್ಟ್ ಬೇಡ. ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ಮೂಲಕ ಅನಗತ್ಯ ಟೆಸ್ಟಿಂಗ್ ಹಾಗೂ ಅದಕ್ಕೆ ವ್ಯಯಿಸುತ್ತಿದ್ದ ಸಮಯ, ಆರ್ಥಿಕ ಸಂಪನ್ಮೂಲ ಉಳಿಕೆಯಾಗಲಿದೆ.

Articles You Might Like

Share This Article