ಬೆಂಗಳೂರು, ಜ.1- ಕೋವಿಡ್ 3 ನೇ ಅಲೆ ಎದುರಿಸಲು ಸಿದ್ದತೆ ಪ್ರಾರಂಭ ಮಾಡಿದ್ದು, 24 ಗಂಟೆ ಲಸಿಕೆ ಕೊಡುವ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲಸಿಕೆ ನಮಲ್ಲಿ ಕೊರತೆ ಇಲ್ಲ. 15-18 ವರ್ಷ ಮಕ್ಕಳಿಗೆ ಸೋಮವಾರ ಲಸಿಕೆ ಅಭಿಯಾನ ಪ್ರಾರಂಭ ಆಗುತ್ತದೆ.
60 ವರ್ಷ ಮೇಲ್ಪಟ್ಟವರು ಮತ್ತು ಹೆಲ್ತï ವಾರಿಯರ್ಸ್ ಗೆ ಬೂಸ್ಟರ್ ಡೋಸ್ ಕೊಡಲು ಸಿದ್ದತೆ ಮಾಡಿದ್ದೇವೆ.ವೈದ್ಯರು, ಔಷಧಿ, ಸಿಬ್ಬಂದಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ನಿತ್ಯ ಕೇಸ್ ಜಾಸ್ತಿ ಆಗ್ತಿದೆ. ಹಂತ ಹಂತವಾಗಿ ಕೇಸ್ ಹೆಚ್ಚಳ ಆಗ್ತಿದೆ. ಹೀಗಂತಾ 3 ನೇ ಅಲೆ ಬಂದಿದೆ ಅಂತ ಹೇಳೋದು ತುಂಬಾ ಬೇಗ ಆಗುತ್ತೆ.
ಇನ್ನು ಕಾದು ನೋಡೋಣ ಏನ್ ಆಗುತ್ತದೆ. ಆದರೂ ಸಿದ್ದತೆ ನಾವು ಪ್ರಾರಂಭ ಮಾಡಿದ್ದೇವೆ. ಬೂಸ್ಟರ್ ಡೋಸ್ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ಮಕ್ಕಳಿಗೂ ಲಸಿಕೆ ಕೊಡುತ್ತಿದ್ದೇವೆ.
ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಿಎಂ ನೀರಾವರಿ ವಿಚಾರದಲ್ಲಿ ಎಕ್ಸ್ ಪರ್ಟ್. ಒಂದು ರೀತಿ ಭಗೀರಥ ಇದ್ದ ಹಾಗೆ. ನೀರಾವರಿ ಯೋಜನೆ, ವಿಚಾರದ ಬಗ್ಗೆ ಜ್ಞಾನ ಇರುವ ವ್ಯಕ್ತಿ ಮುಖ್ಯಮಂತ್ರು ಬಸವರಾಜ ಬೊಮ್ಮಾಯಿ ಅವರು. ಮೇಕೆದಾಟು ವಿಚಾರವಾಗಿ ಸರ್ಕಾರದ ನಿಲುವನ್ನ ಸದನದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಕಾಂಗ್ರೆಸ್ ತನ್ನ ಅವಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ಮಾಡುತ್ತಿದೆ. ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮತ್ತು ಅವಕಾಶವಾದಿ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಮೇಕೆದಾಟು ನಮ್ಮ ನಾಡಿಗೆ ಮುಖ್ಯ. ನಮ್ಮ ಬೆಂಗಳೂರಿಗೆ ಮುಖ್ಯ. ನಮ್ಮ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸಿಎಂ ಕೂಡ 3 ನೇ ತಾರೀಖು ರಾಮನಗರ ಪ್ರವಾಸ ಮಾಡುತ್ತಾರೆ. ಕುಡಿಯುವ ನೀರಿನ ಯೋಜನೆ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ. ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಲಾಭಕ್ಕೆ ಮಾತ್ರ ಎಂದು ಟೀಕಿಸಿದರು.
ಅತಿಥಿ ಉಪನ್ಯಾಸಕರು ಯಾವುದೇ ನೊಟೀಸ್ ನೀಡದೇ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರು ಕಡಿಮೆ ಇರೋದಕ್ಕೆ ಅತಿಥಿ ಉಪನ್ಯಾಸಕರನ್ನ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ಸರ್ಕಾರ ಸದಾ ಅತಿಥಿ ಉಪನ್ಯಾಸಕರ ಪರ ಇದೆ. ಕೊರೊನಾ ಸಮಯದಲ್ಲೂ ನಮ್ಮ ಸರ್ಕಾರ ಸಂಬಳ ನೀಡದೆ. ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚಳದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ನೇರವಾಗಿ ಹುದ್ದಾÉ ಖಾಯಂ ಮಾಡೋಕೆ ಸಾಧ್ಯವಿಲ್ಲ.
ಉಮಾದೇವಿ ಪ್ರಕರಣದಿಂದಾಗಿ ನಮಗೆ ಅನೇಕ ನಿಯಮಗಳು ಅಡ್ಡ ಬರುತ್ತವೆ. ಆದರೂ ನಾವು ಅತಿಥಿ ಉಪನ್ಯಾಸಕರ ಪರವಾಗಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ಕಮಿಟಿ ನೇಮಕ ಮಾಡಲಾಗಿದೆ. ಸಮಿತಿ ವರದಿ ಬಂದ ಬಳಿಕ ಸರ್ಕಾರದಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡಿಕೊಡುತ್ತೇವೆ ಎಂದು ಅಶ್ವಥ್ ನಾರಾಯಣ ಹೇಳಿದರು.
