ಅಕ್ರಮವಾಗಿ ಕಸಾಯಿಖಾನೆಗೆ ಗೋವು ಸಾಗಿಸುತಿದ್ದ ನಾಲ್ವರ ಬಂಧನ

Social Share

ಬೇಲೂರು, ಅ.17- ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದ ಆರೋಪಿಗಳನ್ನು ಬಂಧಿಸಿರುವ ಬೇಲೂರು ಪೊಲೀಸರು ಗೋ ಸಾಗಾಣೆ ಆರೋಪದಡಿ ಪ್ರಕರಣ ದಾಖಲಿಸಿ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಗಚಿ ನದಿ ಸಮೀಪದಲ್ಲಿರುವ ಮಂಜುನಾಥ ಕಲ್ಯಾಣ ಮಂಟಪದ ಆವರಣದಲ್ಲಿ ಐದು ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

ದಾಳಿ ನಡೆಸಿದ ಬೇಲೂರು ಪೊಲೀಸರು ಗೋವುಗಳೊಂದಿಗೆ ಆರೋಪಿಗಳಾದ ಅಬ್ರಾರ್(24), ವಾಸಿಂ(28), ಆನೀಮ್‍ಉದ್ದೀನ್(24), ಸಯ್ಯದ್ ಇಮ್ರಾನ್(33)ನನ್ನು ವಶಕ್ಕೆ ಪಡೆದು ಬೇಲೂರು ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಸಿ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸ್‍ಐ ಶಿವನಗೌಡ.ಜಿ.ಪಾಟೀಲ್, ಸಿಬ್ಬಂದಿ ದೇವೇಂದ್ರ, ಚೇತನ್, ನಾಗೇಶ್, ರಮೇಶ್ ಇದ್ದರು.

Articles You Might Like

Share This Article